ಇಂದು ನೆಮ್ಮಾರು ವಿಶೇಷ ಗ್ರಾಮಸಭೆ
ಶೃಂಗೇರಿ: ತಾಲೂಕಿನ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳು ಮೇ 31 ರ ಶುಕ್ರವಾರ ನಡೆಯಲಿದೆ. ಬೆಳಿಗ್ಗೆ ನೆಮ್ಮಾರು, ನೆಮ್ಮಾರು ಎಸ್ಟೇಟ್, ಹರೂರು, ಮಲ್ನಾಡ್ ಗ್ರಾಮಗಳಲ್ಲಿ ವಾರ್ಡ್ ಸಭೆಗಳು ನಡೆಯಲಿದ್ದು, ಮಧ್ನಾಹ್ನ ನೆಮ್ಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ವಿಶೇಷ ಗ್ರಾಮಸಭೆ ನಡೆಯಲಿದೆ. ಗ್ರಾಪಂ ಅಧ್ಯಕ್ಷೆ ಲಲಿತಾರಾಮಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗ್ರಾಮಸ್ಥರು ತಮ್ಮ ಗ್ರಾಮದ, ತಮ್ಮ ಕುಂದು ಕೊರತೆ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ಮಂಡಿಸಿ, ಮನವಿ ಸಲ್ಲಿಸಬಹುದಾಗಿದೆ. ಗ್ರಾಮಸ್ಥರು ಈ ಸಭೆಯ ಸದುಪಯೋಗಪಡೆದು ಕೊಳ್ಳಬಹುದಗಾಗಿದೆ.
ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ 2013-14ನೇ ಶೈಕ್ಷಣಿಕೆ ಸಾಲಿಗೆ ಬಿಎ, ಬಿಕಾಂ, ಬಿಬಿಎಂ ಹಾಗೂ ಬಿಎಸ್ಸಿ ಕೋರ್ಸುಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಪಡೆಯುವ ಆಸಕ್ತ ವಿದ್ಯಾರ್ಥಿಗಳು ಕಾಲೇಜು ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ದೂ- 08265221005.
ಗುಡುಗು ಸಹಿತ ಭಾರಿ ಮಳೆ
ತರೀಕೆರೆ: ಬುಧವಾರ ಮಧ್ಯಾಹ್ನ ಉತ್ತಮ ಮಳೆಯಾಗಿದ್ದ ತರೀಕೆರೆ ಪಟ್ಟಣ ಮತ್ತು ಸುತ್ತಮುತ್ತ ಗುರುವಾರ ರಾತ್ರಿ 9-30 ರಿಂದ ಮಿಂಚು ಗುಡುಗು ಸಹಿತ ಧಟ್ಟ ಮಳೆ ಸುರಿಯಿತು. ಗುರುವಾರ ಇಡೀ ದಿನ ಮೋಡ ಕವಿದ ವಾತಾವರಣ ಇದ್ದರೂ ಸಂಜೆವರೆಗೆ ಮಳೆ ಬಂದಿರಲಿಲ್ಲ. ಆದರೆ, 9-30 ರ ನಂತರ ಮಿಂಚು ಗುಡುಗು ಸಹಿತ ಉತ್ತಮ ಮಟ್ಟದ ಮಳೆಯಾಯಿತು. ದಟ್ಟ ಮಳೆಯಿಂದ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ಮತ್ತು ರಸ್ತೆ ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು. ಒಳ್ಳೆಯ ಮಳೆಯಿಂದಾಗಿ ಪಟ್ಟಣ ಮತ್ತು ಸುತ್ತಮುತ್ತ ತಂಪಾದ ವಾತಾವರಣ ಉಂಟಾಗಿದೆ. ಉತ್ತಮ ಮಳೆಯಿಂದಾಗಿ ಜನರಿಗೆ ಹರ್ಷ ಉಂಟಾಗಿದೆ. ಮಳೆ ಹೀಗೆ ಮುಂದುವರಿದು ಕೆರೆ ಕಟ್ಟೆಗಳು, ಜಲಾಶಯಗಳು ಭರ್ತಿಯಾಗಲಿ ಎಂಬುದು ಎಲ್ಲರ ಶುಭ ಹಾರೈಕೆಯಾಗಿದೆ.
ಜೆಸಿಸ್ ಪದಗ್ರಹಣ
ಶೃಂಗೇರಿ: ಜೆಸಿಸ್ ಪದಗ್ರಹಣ ಸಮಾರಂಭ ಭಾನುವಾರ ಪಟ್ಟಣದ ಅಧ್ವೈತ ಲ್ಯಾನ್ಸರ್ ಸಭಾಂಗಣದಲ್ಲಿ ನಡೆಯಲಿದೆ. ಜೆಸಿಐ ಅಧ್ಯಕ್ಷ ತಲಾಗಾರು ನಾಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೇವತಿ ಪೂವಯ್ಯ, ಪೂರ್ಣಿಮಾ ಕೆ.ಎಸ್. ಸಮಾಸೋಮಶೇಖರ್ ಪಾಲ್ಗೊಳ್ಳಲಿದ್ದಾರೆ.