ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜ್ಯ ಸರ್ಕಾರದ ಆತುರದ ನಿರ್ಧಾರ

Lingaraj Badiger
Updated On : 31 May 2013, 11:09 am

ತರೀಕೆರೆ: ರಾಜ್ಯ ಸರ್ಕಾರ ಗುರುವಾರ ನಡೆಸಿದ ಅದಿವೇಶನದಲ್ಲಿ ಗುಟ್ಕಾ ರದ್ದು ಮಾಡಿರುವ ವಿಚಾರ ತಿಳಿದು ಅಡಕೆ ಬೆಳೆಗಾರರಿಗೆ ಅತಂಕವುಂಟಾಗಿದೆ.  ಇದರಿಂದ ಜೀವನಾಧಾರವಾಗಿ ಅಡಕೆ ಬೆಳೆಯನ್ನೇ ನಂಬಿದ್ದವರು ಬೀದಿಗೆ ಬೀಳುವ ಸಂದರ್ಭ ಎದುರಾಗಿದೆ.ಜೂನ್ 12 ಮತ್ತು 13 ರಂದು, ಉಚ್ಚ ನ್ಯಾಯಾಲಯದಲ್ಲಿ ಈ ಬಗ್ಗೆ  ವಿಚಾರಣೆ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅವಸರದ ತೀರ್ಮಾನದ ಅವಶ್ಯಕತೆ ಇರಲಿಲ್ಲ ಎಂದು ಮ್ಯಾಮ್‌ಕೋಸ್ ನಿರ್ದೇಶಕ,ರಾಜ್ಯ ಅಡಕೆ ಮಾರಾಟ ಮಂಡಳಿ ನಿರ್ದೇಶಕ ಆರ್. ದೇವಾನಂದ್ ತಿಳಿಸಿದ್ದಾರೆ.
ಪರ್ಯಾಯ ಬೆಳೆ: ರಾಜ್ಯ ಸರ್ಕಾರ ಗುಟ್ಕಾದಲ್ಲಿರುವ ವಿಷಕಾರಕ ವಸ್ತುಗಳನ್ನು ರದ್ದುಪಡಿಸಲಿ, ಗುಟ್ಕಾ ರದ್ದು ಮಾಡುವ ಬದಲು ಅಡಕೆ ಬೆಳೆಗಾರರೊಂದಿಗೆ ಮಾತುಕತೆ ನೆಡೆಸಿ, ಪರ್ಯಾಯ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು. ಅಡಕೆ ಬೆಳೆಗಾರರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು, ಇದರ ಜೊತೆಗೆ ತಂಬಾಕು, ಮದ್ಯ ಇತರ ಕ್ಯಾನ್ಸರ್ ಕಾರಕ ವಸ್ತುಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement