ಕ್ಷೇತ್ರಾಧ್ಯಕ್ಷರಾಗಿ ಉಮಾಪತಿ ಮುಂದುವರಿಕೆ
ಮೂಡಿಗೆರೆ: ತಾಲೂಕ್ ಜೆಡಿಎಸ್ ಪಕ್ಷದ ಕ್ಷೇತ್ರಾಧ್ಯಕ್ಷರಾಗಿ ಡಿ.ಆರ್. ಉಮಾಪತಿ ಅವರೇ ಮುಂದುವೆರೆಯಲಿದ್ದಾರೆ ಎಂದು ಶಾಸಕ ಬಿ.ಬಿ. ನಿಂಗಯ್ಯ ತಿಳಿಸಿದರು.
ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಆರ್. ಉಮಾಪತಿ ಕಳೆದ10 ವರ್ಷಗ ಳಿಂದಲೂ ಕ್ಷೇತ್ರಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಪಕ್ಷದ ಏಳಿಗೆಗೆ ಶ್ರಮಿಸಿದ್ದಾರೆ. ಯಾವುದೋ ಒತ್ತಡಕ್ಕೆ ಸಿಲುಕಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದರು.
ಪಕ್ಷದ ಅಧ್ಯಕ್ಷರು ಮತ್ತು ಕಾರ್ಯಕರ್ತರ ಒಮ್ಮತ ತೀರ್ಮಾನದಂತೆ ರಾಜಿನಾಮೆಯನ್ನು ತಿರಸ್ಕರಿಸಲಾಗಿದೆ. ಬಸ್ ನಿಲ್ದಾಣದ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ರಸ್ತೆ ಅಗಲೀಕರಣವು ಪ್ರಾರಂಭವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜಪ್ಪಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ರಂಜನ್ ಅಜಿತ್ ಕುಮಾರ್, ಕ್ಷೇತ್ರಾಧ್ಯಕ್ಷ ಡಿ.ಆರ್. ಉಮಾಪತಿ, ವಿರೇಗೌಡ, ರಮೇಶ್, ಗಬ್ಬಳ್ಳಿ ಚಂದ್ರೇಗೌಡ, ರಾಜ್ಯ ಸಮಿತಿಯ ಎಂ.ಎಸ್. ಬಾಲಕೃಷ್ಣ, ವಿಜೇಂದ್ರ, ಲೋಹಿತ್, ಬಿ.ಎಂ. ಭೈರೇಗೌಡ ಸೇರಿದಂತೆ ಹೋಬಳಿ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಶಾಂತಿಗಾಗಿ ಸಾಹಿತ್ಯ ಕಾರ್ಯಕ್ರಮ
ತರೀಕೆರೆ: ಜಮಾ ಆತೆ ಇಸ್ಲಾಮಿ ಹಿಂದ್ ತರೀಕೆರೆ ವತಿಯಿಂದ ಶಾಂತಿ ಪ್ರಕಾಶನ ರಜತ ಮಹೋತ್ಸವ ರಾಜ್ಯಾವ್ಯಾಪ್ತಿ ಅಭಿಯಾನ ಅಂಗವಾಗಿ ಶನಿವಾರ ಪಟ್ಟಣದ ಇಸ್ಲಾಮಿಕ್ ಸೆಂಟರ್ ದಾರುಲ್ ಇಸ್ಲಾಂನಲ್ಲಿ ಶಾಂತಿಗಾಗಿ ಸಾಹಿತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಮಾ ಆತೆ ಇಸ್ಲಾಮಿ ಹಿಂದ್ ಕಾರ್ಯಕರ್ತ ಶೇಖ್ ಜವೀದ್ ಮಾತನಾಡಿ, ನ.1ರಿಂದ 30ರ ವರೆಗೆ ಶಾಂತಿಗಾಗಿ ಸಾಹಿತ್ಯ ಎಂಬ ಅಭಿಯಾನವನ್ನು ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ನ.10ರಿಂದ 17ರ ವರಗೆ ಪುಸ್ತಕ ಮೇಳ ಮತ್ತು ನ.14 ರಂದು ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ನಯಾಜ್ ಹುಸೇನ್ ತಿಳಿಸಿದರು.
ಅಧ್ಯಕ್ಷರಾಗಿ ಕುಮಾರ್ ಆಯ್ಕೆ
ಚಿಕ್ಕಮಗಳೂರು: ನಗರದ ಟೌನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಸಿ.ವಿ. ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸ್ ರವರಿಂದ ತೆರವಾಗಿದ್ದ ಸ್ಥಾನಕ್ಕೆ ನಗರದ ಎಂ.ಜಿ. ರಸ್ತೆಯಲ್ಲಿರುವ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಗುರುಮೂರ್ತಿ ಈ ಅಯ್ಕೆಯನ್ನು ಪ್ರಕಟಿಸಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷರನ್ನು ಗೌರವಿಸಲಾಯಿತು.
ಉಪಾಧ್ಯಕ್ಷೆ ಆಶಾ, ನಿರ್ದೇಶಕರಾದ ಬಿ.ಎನ್. ರಾಜಣ್ಣ ಶೆಟ್ಟಿ, ಮೊಗಣ್ಣ, ಸಿ.ಆರ್. ಕೇಶವಮೂರ್ತಿ, ಎಲ್.ವಿ. ಬಸವರಾಜು, ಹಿರೇಮಗಳೂರು ರಾಮಚಂದ್ರ, ಎಂ.ಎಸ್. ಗಿರಿಧರ ಯತೀಶ್, ಸಹಕಾರ ಸಂಘದ ಸಹಾಯಕ ನಿಬಂಧಕ ಕಚೇರಿ ನಿರೀಕ್ಷಕ ಸಿ.ಸಿ. ರುದ್ರೇಗೌಡ, ಸಿ.ಜಿ. ಪರಮೇಶ್ವರ್, ವ್ಯವಸ್ಥಾಪಕ ಹಾಲೇಶ್ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸವಲತ್ತು ಬಳಕೆ ಅಗತ್ಯ: ಶಾಂತ
ತರೀಕೆರೆ: ಗ್ರಾಮೀಣ ಭಾಗದ ಯುವ ಸಂಘಗಳು ಹೆಚ್ಚು ಕ್ರೀಯಾಶೀಲವಾಗುವ ಮೂಲಕ ನೆಹರು ಯುವ ಕೇಂದ್ರ ನೀಡುವ ಸವಲತ್ತುಗಳನ್ನು ಸಂಪೂರ್ಣವಾಗಿ ಪಡೆಯಲು ಮುಂದಾಗಬೇಕು ಎಂದು ತಾಪಂ ಅಧ್ಯಕ್ಷೆ ಶಾಂತ ಗುರುಮೂರ್ತಿ ತಿಳಿಸಿದ್ದಾರೆ. ಸಮೀಪದ ಬುಕ್ಕಾಂಬುದಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ನೆಹರೂ ಯವ ಕೇಂದ್ರ, ಕನ್ನಡ ಯುವ ಸಂಘ (ಮಾರ್ಗದರ್ಶಿ ಯುವಕ ಸಂಘ) ವತಿಯಿಂದ ನಡೆದ ತಾಲೂಕು ಮಟ್ಟದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಎನ್. ವೀರಭದ್ರಪ್ಪ ಅವರು ಮಾತನಾಡಿ, ನೆಹರು ಯುವ ಕೇಂದ್ರ ಪ್ರತಿ ವರ್ಷ ಯುವ ಜನರಿಗಾಗಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಆಯ್ದ ಆಸಕ್ತ
ಯುವ ಜನರು ಯುವ ಸಂಘಗಳ ಮೂಲಕ ಕೌಶಲ್ಯಾಭಿವೃದ್ಧಿ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಯೋಜನ ಹೊಂದುತ್ತಿರುವುದಾಗಿ ತಿಳಿಸಿದರು.
ಗ್ರಾಪಂ ಸದಸ್ಯೆ ಅಂಬಿಕಾ, ಸ್ವಸಹಾಯ ಸಂಘಗಳ ಅಧ್ಯಕ್ಷೆ ಭಾಗ್ಯ ಮಾತನಾಡಿದರು. ರಾಷ್ಟ್ರೀಯ ಯುವ ಸೇವಾ ಕಾರ್ಯಕರ್ತೆ ಶ್ರುತಿ, ಮೇಘರಾಜ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಡಿಮೆ ಬೆಲೆಗೆ ಮರ ಮಾರಾಟ: ಆರೋಪ
ತರೀಕೆರೆ: ಅರಣ್ಯ ಇಲಾಖೆಯಿಂದ ಕಡಿಮೆ ಬೆಲೆಗೆ ಮರವನ್ನು ಹರಾಜು ಮಾಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ಬೆಳೆದಿದ್ದ ಹೆಚ್ಚು ಬೆಲೆ ಬಾಳುವ ನೀಲಗಿರಿ ಮರವನ್ನು ಕಡಿಮೆ ಬೆಲೆಗೆ ಹರಾಜು ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿದ್ದಾರೆ.
ಅಪಘಾತ: ಪರಿಹಾರ ಚೆಕ್ ವಿತರಣೆ
ನರಸಿಂಹರಾಜಪುರ: ಆಕಸ್ಮಿಕವಾಗಿ ಮೃತಪಟ್ಟ ತಾಲೂಕಿನ ಹೆನ್ನಂಗಿ ಗ್ರಾಮದ ಮೀನಾಕ್ಷಮ್ಮ ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ 1 ಲಕ್ಷ ಪರಿಹಾರದ ಚೆಕ್ ಅನ್ನು ಶಾಸಕ ಡಿ.ಎನ್. ಜೀವರಾಜ್ ಗುರುವಾರ ಕೃಷಿ ಇಲಾಖೆ ಆವರಣದಲ್ಲಿ ಮೀನಾಕ್ಷಮ್ಮ ಅವರ ಪುತ್ರ ಕುಮಾರ್ ಅವರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ಸೊಣ್ಣಪ್ಪ ರೆಡ್ಡಿ, ಕೃಷಿ ಇಲಾಖೆಯ ಅಧಿಕಾರಿ ವಿ.ಎಸ್. ಶಿವಮೂರ್ತಿ ಉಪಸ್ಥಿತರಿದ್ದರು.
ಇಂದು ಮದರಸ ಶಂಕುಸ್ಥಾಪನೆ
ನರಸಿಂಹರಾಜಪುರ: ತಾಲೂಕಿನ ಶೆಟ್ಟಿಕೊಪ್ಪ ಸಮೀಪದ ಭದ್ರಾ ಕಾಲೋನಿಯ ಮುಹಿದ್ದೀನ್ ಜುಮ್ಮಾ ಮಸೀದಿ ಆವರಣದಲ್ಲಿ ಹಿದಾಯತುಲ್ ಇಸ್ಲಾಂ ಅರಬ್ಬೀ ಮದರಸದ ಶಂಕುಸ್ಥಾಪನೆ, ಸಮುದಾಯಭವನ ಮತ್ತು ರಂಗಮಂದಿರದ ಉದ್ಘಾಟನಾ ಸಮಾರಂಭವು ನ.10ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ. ಕಾರ್ಗಲ್ನ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಅಲ್ ಹಾಜಿ ಸಿ ಮಹಮ್ಮದ್ ಅವರ ಸಾನ್ನಿಧ್ಯದಲ್ಲಿ ಶೆಟ್ಟಿಕೊಪ್ಪ ಮುಹಿದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಹನೀಫ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಂಸದ ಜಯಪ್ರಕಾಶ ಹೆಗಡೆ ಹಿದಾಯತುಲ್ ಇಸ್ಲಾಂ ಅರಬ್ಬೀ ಮದರಸದ ಶಂಕುಸ್ಥಾಪನೆ ಮಾಡಲಿದ್ದಾರೆ. ಶಾಸಕ ಡಿ.ಎನ್. ಜೀವರಾಜ್ ರಂಗಮಂದಿರ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಸಮುದಾಯಭವನ ಉದ್ಘಾಟಿಸಲಿದ್ದಾರೆ. ಶೆಟ್ಟಿಕೊಪ್ಪ ಮುಹಿದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಜನಾಬ್ ಎನ್.ಎಸ್. ಸುಲೈಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ.