ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭಾಷೆಗೆ ಮಡಿವಂತಿಕೆ ಸಲ್ಲದು: ಜಯಶ್ರೀ

Lingaraj Badiger
Updated On : 11 Nov 2013, 10:48 am

ತರೀಕೆರೆ: ಭಾಷೆಗೆ ಮಡಿವಂತಿಕೆ ಸಲ್ಲದು ಎಂದು ಪಾರಂಪರಿಕ ವೈದ್ಯೆ ಜಯಶ್ರೀ ತಿಳಿಸಿದರು. ಅಮೃತಾಪುರ ಹೋಬಳಿ ಕಸಾಪ ವತಿಯಿಂದ ಹುಣಸಘಟ್ಟ ಗ್ರಾಮದಲ್ಲಿ ನಡೆದ ರಾಜ್ಯೋತ್ಸವ- ನಿತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಅನ್ಯ ಭಾಷೆಯ ಸಂಪತ್ತನ್ನು ತನ್ನದಾಗಿಸಿಕೊಂಡು ಭಾಷೆ ಸಮೃದ್ಧಗೊಳ್ಳಬೇಕು. ಕನ್ನಡ ಅತ್ಯಂತ ಪ್ರಾಚೀನ ಭಾಷೆ, ಕನ್ನಡ ಪದಗಳು ಬೇರೆ ಭಾಷೆಯಲ್ಲಿ ಮಿಳಿತಗೊಂಡಿದ್ದು, ಆದರಂತೆ ಕನ್ನಡ ಭಾಷೆಯಲ್ಲಿಯೂ ಹಲವು ಭಾಷೆಗಳ ಪದಗಳು ಸೇರಿಕೊಂಡಿದೆ. ಯಾವುದೇ ಭಾಷೆಯ ಪದ ಸಂಪತ್ತನ್ನು ತನ್ನದಾಗಿಸಿಕೊಳ್ಳುವ ಮೂಲಕ ಭಾಷೆ ಬೆಳೆದಾಗ ಮಾತ್ರ ಅದರ ವ್ಯಾಪಕತೆ ಹೆಚ್ಚಲು ಸಾಧ್ಯ ಎಂದು ಹೇಳಿದರು.
ತಾಪಂ ಸದಸ್ಯೆ ರೇಖಾ ಜಯ್ಯಣ್ಣ ಮಾತನಾಡಿ, ಅನ್ಯ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡವನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಾನ್ವೆಂಟ್ ಹೆಸರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಪ್ರಾರಂಭವಾಗಿದ್ದು, ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮರೆಮಾಚುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಾತೃಭಾಷೆಯೊಂದೇ ಆಸರೆ: ಅಮೃತಾಪುರ ಹೋಬಳಿ ಕಸಾಪ ಅಧ್ಯಕ್ಷೆ ಅರ್ಚನಾ ಗುರುಮೂರ್ತಿ ಮಾತನಾಡಿ, ಭಾಷೆ ಬಗ್ಗೆ ಕೀಳರಿಮೆ ಸಲ್ಲದು. ಮಾತೃಭಾಷೆಯೊಂದೇ ನಮ್ಮ ಬದುಕಿಗೆ ಸದಾ ಆಸರೆ ಎಂಬುದನ್ನು ಮನಗಾಣಬೇಕಿದೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಮಾತನಾಡಿ, ಯಾವುದೇ ಭಾಷೆ ತನಗೆ ಅನ್ನ ನೀಡುವ ಭಾಷೆಯಾಗಿ ಮಾರ್ಪಟ್ಟಾಗ ಆ ಭಾಷೆ ತನ್ನಿಂದ ತಾನೇ ಬೆಳೆಯುತ್ತಾ ಹೋಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕನ್ನಡ ಉಳಿಸುವಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು. ಪುಷ್ಪ, ರಜನಿ, ದೀಪ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement