ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಲಬಾಧೆ: ರೈತ ಆತ್ಮಹತ್ಯೆ

Lingaraj Badiger
Updated On : 11 Nov 2013, 10:48 am

ನರಸಿಂಹರಾಜಪುರ: ಮುತ್ತಿನಕೊಪ್ಪದ ರೈತ ಪ್ರಕಾಶಗೌಡ (55) ಸಾಲದ ಬಾಧೆ ತಾಳಲಾರದೆ ಭಾನುವಾರ ಮಧ್ಯಾಹ್ನ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವಿಪರೀತ ಸಾಲ ಮಾಡಿದ್ದ ಪ್ರಕಾಶಗೌಡ ಸಾಲ ತೀರಿಸಲಾಗದೆ ಮದ್ಯ ವ್ಯಸನಿಯಾಗಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
22ರಂದು ಬ್ರಹ್ಮ ರಥೋತ್ಸವ
ಚಿಕ್ಕಮಗಳೂರು: ನಗರದ ಶ್ರೀ ಕಾಮಧೇನು ಕ್ಷೇತ್ರದ ಶ್ರೀ ಬ್ರಹ್ಮ ರಥೋತ್ಸವ ನ. 22 ರಂದು ಜರುಗಲಿದೆ. ನ.20 ರಿಂದ 22 ರವರೆಗೆ ಶ್ರೀ ಕ್ಷೇತ್ರದ 14ನೇ ವಾರ್ಷಿಕೋತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಎಂ.ಎಸ್. ನಂಜುಂಡಸ್ವಾಮಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ. 20 ರಂದು ಬೆಳಿಗ್ಗೆ 7 ಗಂಟೆಗೆ ಕಾಫಿ ಬೆಳೆಗಾರರಾದ ಎಂ.ಆರ್. ಸಣ್ಣಸಿದ್ದೇಗೌಡ ಅವರು ಧರ್ಮಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಫಲಪಂಚಾಮೃತ ಅಭಿಷೇಕ, ನವಗ್ರಹ ಹೋಮ, ಪೂರ್ಣಾಹುತಿ, ತೀರ್ಥ ಪ್ರಸಾದ ವಿನಿಯೋಗ ಜರುಗಲಿದ್ದು, ಇದೇ ದಿನದಂದು ರಾಜಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ಮರು ದಿನ ಸಂಕಷ್ಟಹರ ಚತುರ್ಥಿ ಪೂಜೆ, ನಂತರದಲ್ಲಿ ರಾಜಬೀದಿಗಳಲ್ಲಿ ಗರುಡೋತ್ಸವ ನಡೆಯಲಿದೆ. 22 ರಂದು ಕ್ಷೀರಾಭಿಷೇಕ ನಡೆಯಲಿದ್ದು, 11 ಗಂಟೆಗೆ ನಡೆಯಲಿರುವ ಧರ್ಮ ಸಭೆಯಲ್ಲಿ ಸಮಾಜ ಸೇವಕರಿಗೆ ಶ್ರೀ ಕಾಮಧೇನು ಸೇವಾರತ್ನ ಪ್ರಶಸ್ತಿಯನ್ನು ವಿತರಣೆ ಮಾಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement