17ರಂದು ಪ್ರಾಣೇಶ್ ಹಾಸ್ಯ ಹೊನಲು
ಮೂಡಿಗೆರೆ: ಮೂಡಿಗೆರೆ ಜೆ.ಸಿ.ಐ. ಸಂಸ್ಥೆಯ 40 ನೇ ವರ್ಷಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್ ತಂಡದವರಿಂದ ಹಾಸ್ಯದ ಹೊನಲು ಕಾರ್ಯಕ್ರಮ ಆಯೋಜಿಸಲಾಗಿದೆ.
ನವೆಂಬರ್ 17 ರ ಭಾನುವಾರ ಸಂಜೆ 5 ಗಂಟೆಯಿಂದ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮನಿ ಮತ್ತು ನರಸಿಂಹ ಜೋಷಿ ಇವರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರವೇಶ ಪತ್ರಗಳು ಮೂಡಿಗೆರೆ ಜೇಸಿ ಭವನದಲ್ಲಿ ದೊರೆಯಲಿದ್ದು ಆಸಕ್ತರು ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜೆ.ಸಿ.ಐ. ಪ್ರಕಟಣೆಯಲ್ಲಿ ತಿಳಿಸಿದೆ.
ಜ್ವಾಲಾಮಾಲಿನಿಗೆ ಎಕ್ಷಲೆನ್ಸಿ ಅವಾರ್ಡ್
ನರಸಿಂಹರಾಜಪುರ: ಮೈಸೂರಿನಲ್ಲಿ ನಡೆದ ಜೇಸಿ ಸಂಭ್ರಮ ವಲಯ ಸಮ್ಮೇಳನದಲ್ಲಿ ವಲಯ 14ರ ಡಿ ವಿಭಾಗದ ನರಸಿಂಹರಾಜಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಗೆ 2013 ನೇ ಎಕ್ಷಲೆನ್ಸಿ ಅವಾರ್ಡ್ ಲಭಿಸಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಸ್. ಶೇಷಗಿರಿ ತಿಳಿಸಿದ್ದಾರೆ. ವಲಯ 14 ರ ಜೇಸಿ ಅಧ್ಯಕ್ಷ ದೇವಿಪ್ರಸಾದ್ ಹಾಗೂ ಉಪಾಧ್ಯಕ್ಷ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಗೆ ಘಟಕದ ಉತ್ತಮ ನಿರ್ವಹಣೆಗೆ ಎಕ್ಷ ಲೆನ್ಸಿ ಅವಾರ್ಡ್ ಲಭಿಸಿದೆ. ಘಟಕಾಧ್ಯಕ್ಷರ ಕಾರ್ಯಕ್ಷಮತೆಗೆ ವಿಶೇಷ ಪುರಸ್ಕಾರ ನೀಡಲಾಯಿತು