ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

208 ಲಕ್ಷ ಬೆಳೆ ಸಾಲ ವಿತರಣೆ: ಸುಬ್ರಮಣ್ಯ

Rashmi Kasaragodu
Updated On : 12 Nov 2013, 11:35 am

ನರಸಿಂಹರಾಜಪುರ: ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘವು ಪ್ರಸ್ತುತ ವರ್ಷ 208.04 ಲಕ್ಷ ಬೆಳೆ ಸಾಲ ವಿತರಿಸಿದೆ ಎಂದು ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್. ಸುಬ್ರಮಣ್ಯ ತಿಳಿಸಿದರು.
ಬಿ.ಎಚ್. ಕೈಮರದಲ್ಲಿ ಸೀತೂರು ವಿಎಸ್ಎಸ್ಎನ್ ಶಾಖಾ ಕಚೇರಿಯ ಆವರಣದಲ್ಲಿ ನಡೆದ ಸಹಕಾರ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಸದಸ್ಯರಿಗೆ ಅಗತ್ಯವಾದ ಗೊಬ್ಬರ, ಕ್ರಿಮಿನಾಶಕ ಹಾಗೂ ದಿನಸಿ ವಸ್ತುಗಳು, ಗೃಹ ಉಪಯೋಗಿ ವಸ್ತುಗಳನ್ನು ನ್ಯಾಯವಾದ ಬೆಲೆಗೆ ಗ್ರಾಹಕರಿಗೆ ನೀಡುತ್ತಿದ್ದೇವೆ. ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಪ್ರಯೋಜನ ಹೊಂದಿದ 25 ಸಾವಿರದವರೆಗಿನ ಎಲ್ಲಾ ಸಾಲಗಾರರಿಗೆ ಸೊನ್ನೆ ಬಡ್ಡಿದರದಲ್ಲಿ ಮತ್ತೆ ಸಾಲ ನೀಡಲಾಗಿದೆ. 25 ಸಾವಿರಕ್ಕೂ ಮೇಲ್ಪಟ್ಟು ಸಾಲ ಮಾಡಿದ 208 ರೈತರಿಗೆ ಮತ್ತೆ ಸಾಲ ನೀಡಬೇಕಾಗಿದೆ. ಸರ್ಕಾರದಿಂದ ಹಣ ಬಂದ ತಕ್ಷಣ ಅವರಿಗೂ ಸಾಲ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ವ್ಯವಸಾಯ ಸೇವಾ ಸಹಕಾರ ಸಂಘದಿಂದ ಮ್ಯಾಮ್ಕೋಸ್ ಏಜೆನ್ಸಿ ಸೌಲಭ್ಯ, ಯಶಸ್ವಿನಿ ಯೋಜನೆ, ಸದಸ್ಯರಿಗೆ ಮರಣೋತ್ತರ ನಿಧಿ ಯೋಜನೆ ಮುಂತಾದ ಸೌಲಭ್ಯಗಳಿದ್ದು ಸದಸ್ಯರು ಅದನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement