ಅನಿಯಮಿತ ವಿದ್ಯುತ್ ಕಡಿತ ಖಂಡನೆ
ಶೃಂಗೇರಿ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇತ್ತಿಚ್ಚಿನ ಕೆಲ ದಿನಗಳಲ್ಲಿ ಹಗಲುರಾತ್ರಿ ವೇಳೆಯಲ್ಲಿ ಅನಿಯಮಿತ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಬಣ) ಖಂಡಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯವಾಗಿರುವುದರಿಂದ ಸಂಜೆಯ ವೇಳೆಯಲ್ಲಿ ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಇದೇ ವೇಳೆಯಲ್ಲಿ ಅಡಕೆ ಕೊಯಿಲು ನಡೆಯುತ್ತಿದೆ. ಕೆಲವೊಮ್ಮೆ ರಾತ್ರಿಯಿಡಿ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು ಗ್ರಾಮೀಣ ಪ್ರದೇಶಗಳು ಕಗ್ಗತ್ತಲ್ಲಲ್ಲಿ ಮುಳುಗುತ್ತಿವೆ ಎಂದು ಆರೋಪಿಸಿದರು. ಮಳೆಗಾಲ ಮುಗಿಯುವ ಮೊದಲೇ ವಿದ್ಯುತ್ ಕಡಿತ ಉಂಟುಮಾಡುತ್ತಿರುವುದು ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಗ್ರಾಹಕರಿಗೆ ಸಮರ್ಪಕವಾದ ಮಾಹಿತಿ ನೀಡದೇ ಸಂಜೆ, ರಾತ್ರಿ ವೇಳೆಯಲ್ಲಿ ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಎಲೆಕ್ಟ್ರಾನಿಕ್ ಉಪಕರಣಗಳಿಗೂ ಹಾನಿಯುಂಟಾಗುತ್ತಿದೆ ಎಂದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಾಲೂಕು ಸಂಚಾಲಕ ರವಿ ಸಾಲ್ಮರ ಎಚ್ಚರಿಸಿದ್ದಾರೆ.
ಲೇಸರ್ ಚಿಕಿತ್ಸೆ
ಶಿವಮೊಗ್ಗ: ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ವೆರಿಕೋಸ್ ವೈನ್ಸ್ಗೆ ಲೇಸರ್ ಚಿಕಿತ್ಸಾ ಶಿಬಿರವನ್ನು ನ.11ರಿಂದ ನ.20ರವರೆಗೆ ನಡೆಯಲಿದೆ. ಬೆ.9ರಿಂದ ಸಂಜೆ 4ರವರೆಗೆ ನಡೆಯುವ ಶಿಬಿರದಲ್ಲಿ ತಪಾಸಣೆಗೆ ಶೇ.50ರಷ್ಟು ರಿಯಾಯಿತಿ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಸ್ಪತ್ರೆ ನಿರ್ದೇಶಕ ಶ್ರೀನಿವಾಸ ಖರೆ ಕೋರಿದ್ದಾರೆ. 08182 221566