ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಮೋನಿಯಂ ನೈಟ್ರೇಟ್ ಸಾಗಣೆ ಮೂಡಿಗೆರೆಯ ಇಬ್ಬರ ಬಂಧನ

Rashmi Kasaragodu
Updated On : 12 Nov 2013, 11:33 am

ಕಲ್ಪೆಟ್ಟಾ (ಕೇರಳ): ಅಕ್ರಮವಾಗಿ ಅಮೋನಿಯಂ ನೈಟ್ರೇಟ್ ಅನ್ನು ಸಾಗಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ 6,750 ಕಿಲೋಗ್ರಾಂನಷ್ಟು ಅಮೋನಿಯಂ ನೈಟ್ರೇಟ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ವಾಹನವೊಂದನ್ನೂ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಕೀಮ್ ಮತ್ತು ಇಶಾಕ್ ಎಂದು ಗುರುತಿಸಲಾಗಿದೆ. ಕೇರಳ-ಕರ್ನಾಟಕ ಗಡಿ ಪ್ರದೇಶದ ಮುತ್ತಂಗ ಎಂಬಲ್ಲಿ ಕಳೆದ ರಾತ್ರಿ ಅಬಕಾರಿ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕಲ್ಲಿಕೋಟೆಯಲ್ಲಿರುವ ಕಲ್ಲಿನ  ಕ್ವಾರಿಯೊಂದಕ್ಕೆ ಅಮೋನಿಯಂ ನೈಟ್ರೇಟ್ ಅನ್ನು ಸಾಗಿಸಲಾಗುತ್ತಿತ್ತು ಎಂದು ಬಂಧಿತರು ತಿಳಿಸಿದ್ದಾರೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕುವಿವಿ ಕುಲಸಚಿವ ಪ್ರೊ. ರಾಮೇಗೌಡ ಎತ್ತಂಗಡಿ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಅಂಕಪಟ್ಟಿ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವು ಮತ್ತೊಂದು ಪ್ರಮುಖ ತಲೆದಂಡ ತೆಗೆದುಕೊಂಡಿದೆ.  ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ. ಎ.ರಾಮೇಗೌಡ ಅವರನ್ನು ಸೋಮವಾರ ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಇವರ ಸ್ಥಾನಕ್ಕೆ ಪ್ರೊ. ಮಲ್ಲಿಕಾಘಂಟಿಯವರನ್ನು ಆಯ್ಕೆ ಮಾಡಿದ್ದು, ಮಂಗಳವಾರ ಬಹುತೇಕ ಅಧಿಕಾರ ಸ್ವೀಕರಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement