ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅವಕಾಶ ವಂಚಿತರಾಗುತ್ತಿರುವ ಪ್ರತಿಭಾವಂತರು

Rashmi Kasaragodu
Updated On : 12 Nov 2013, 11:32 am

ಚಿಕ್ಕಮಗಳೂರು: ವಿವಿಧ ಸಾಂಸ್ಕೃತಿಕ ಕಲೆಗಳಲ್ಲಿ ಪ್ರತಿಭೆಯಿದ್ದರೂ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಬಾಡಿಹೋಗುತ್ತಿದ್ದು ಅಂತಹ ಪ್ರತಿಭೆಗಳನ್ನು ಗುರುತಿಸುವುದು ಅತ್ಯವಶ್ಯಕ ಎಂದು ಉಪ್ಪಳ್ಳಿ ಮಸೀದಿ ಗುರುಗಳಾದ ತ್ವಾಹ ಸಅದಿ ಹೇಳಿದ್ದಾರೆ.
ನಗರದ ಉಪ್ಪಳ್ಳಿ ಶಾಂತಿನಗರದ ಮಸೀದಿಯಲ್ಲಿ ಎಸ್ಎಸ್ಎಫ್ ವಿಭಾಗೀಯ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಇದೊಂದು ಸೂಕ್ತ ವೇದಿಕೆ. ಎಸ್ಎಸ್ಎಫ್ನಿಂದ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಲು ಅನುಕೂಲವಾಗುವಂತೆ ಸಾಂಸ್ಕೃತಿಕ ಕಲೆಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಶಾಖಾ ಮಟ್ಟದಿಂದ ಆರಂಭಗೊಂಡು ಜಿಲ್ಲೆ ಹಾಗೂ ರಾಜ್ಯ ಮಟ್ಟದವರೆಗೂ ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ತಮ್ಮೊಳಗಡಗಿರುವ ಪ್ರತಿಭೆಗಳನ್ನು ಹೊರ ಹಾಕಲು ಸೂಕ್ತ ವೇದಿಕೆಯಾಗಲಿದೆ ಎಂದು ತಿಳಿಸಿ ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಜಿಲ್ಲಾಧ್ಯಕ್ಷ ಕೆ.ಪಿ. ಅಬೂಬಕರ್ ಮಾತನಾಡಿ, ವಿಭಾಗ ವ್ಯಾಪ್ತಿಯ 15 ಸ್ಥಳಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಿರಿಯರು, ಹಿರಿಯರು ಮತ್ತು ಸಾಮಾನ್ಯ ವಿಭಾಗಗಳು ಇದ್ದು ಭಾಷಣ ಸ್ಪರ್ಧೆ, ರಸಪ್ರಶ್ನೆ, ಜ್ಞಾಪಕ ಪರೀಕ್ಷೆ, ಗೋಡೆ ಬರಹ ಸೇರಿದಂತೆ 15 ಮಾದರಿಯ ಸ್ಪರ್ಧೆಗಳು ನಡೆಸಲಾಗಿದೆ ಎಂದರು.
ವಿವಿಧ ಸ್ಪರ್ಧೆಗಳ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಹಮದ್, ಎಪಿಎಸ್ ಹುಸೇನ್ ಆಟಕೋಯ ತಂಜ್ಙಳ್, ಮಹಮದ್ ರಫೀಕ್, ಹನೀಫ್ ಮಿಸ್ಬಾಹಿ, ಹಾರಿಸ್ ಸಖಾಫಿ, ಝೈದ್ ಬಾಹಸನಿ, ಉಸ್ಮಾನ್ ಹಂಡಗುಳಿ, ಶಾಹಿನ್ ಆಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement