ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೈಲು ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಮನವಿ

Rashmi Kasaragodu
Updated On : 12 Nov 2013, 11:34 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ನ.11
ನಗರದಲ್ಲಿ ನೂತನವಾಗಿ ನಿರ್ಮಿಸಿರುವ ರೈಲು ನಿಲ್ದಾಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವಂತೆ ಕುವೆಂಪು ಅಭಿಮಾನಿಗಳ ಬಳಗದ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಅಭಿಮಾನಿಗಳ ಬಳಗದ ಸಂಚಾಲಕ ಐ.ಎ. ಪೂರ್ಣೇಶ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಂತಸದ ವಿಚಾರ: ನಂತರ ಪೂರ್ಣೇಶ್ ಮಾತನಾಡಿ, ಜಿಲ್ಲೆಯ ಜನತೆಯ ಹಲವು ದಶಕಗಳ ಬೇಡಿಕೆಯಾದ ಕಡೂರು- ಚಿಕ್ಕಮಗಳೂರು ರೇಲ್ವೆ ಯೋಜನೆ ಪೂರ್ಣಗೊಂಡು ನ.19ರಂದು ಉದ್ಘಾಟನೆ ಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಸರ್ವಶ್ರೇಷ್ಠ ಕವಿ ಕುವೆಂಪು ಹೆಸರನ್ನು ಇಂತಹ ಯೋಜನೆಗೆ ನಾಮಕರಣ ಮಾಡಿದರೆ ಉದ್ದೇಶ ಫಲಪ್ರದವಾಗುತ್ತದೆ ಎಂದು ಹೇಳಿದರು. ರೈಲು ನಿಲ್ದಾಣದ ಆವರಣದಲ್ಲಿ ಕುವೆಂಪು ಪುತ್ಥಳಿ ಸ್ಥಾಪಿಸಬೇಕೆಂಬುದು ಕುವೆಂಪು ವಿಚಾರಧಾರೆ ಮತ್ತು ಅವರ ಸಾಹಿತ್ಯಾಭಿಮಾನಿಗಳ ಬೇಡಿಕೆಯಾಗಿದೆ.
ಮಲೆನಾಡಿನಲ್ಲಿ ಜನಿಸಿದ ಮಹಾನ್ ಮಾನವತವಾದಿ ದಾರ್ಶನಿಕ ಕವಿಗೆ ಗೌರವ ಸಲ್ಲಿಸಲು ಇದೊಂದು ಸುವರ್ಣಾವಕಾಶವಾಗಿದ್ದು, ಕೇಂದ್ರ ರೇಲ್ವೆ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ರೇಲ್ವೆ ಯೋಜನೆ ಉದ್ಘಾಟಿಸುವ ದಿನದಂದು ಕುವೆಂಪು ಹೆಸರನ್ನು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.
ಮಾಜಿ ನಗರಸಭೆ ಸದಸ್ಯ ಚಂದ್ರಪ್ಪ, ರಘು, ನವೀನ್, ಶಶಿಕಿರಣ್, ಅವಿನಾಶ್, ಸಂದೀಪ್, ಶ್ಯಾಮ್, ಮಂಜುನಾಥ್, ಜೈರಾಮೇಗೌಡ, ಗೋಪಾಲೇಗೌಡ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement