ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ'

Rashmi Kasaragodu
Updated On : 12 Nov 2013, 11:32 am

ಮೂಡಿಗೆರೆ: ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ವಿಶ್ವಾಸವನ್ನು ಗಳಿಸಿದಲ್ಲಿ ಮಾತ್ರ ಸಾರ್ವಜನಿಕರ ಮತ್ತು ಪೊಲೀಸರ ನಡುವಿನ ಭಿನ್ನಾಭಿಪ್ರಾಯ ತೊಡೆಯಲು ಸಾಧ್ಯ ಎಂದು ವೃತ್ತ ನಿರೀಕ್ಷಕ ಎಸ್.ಎಸ್. ಹಿರೇಮಠ್ ತಿಳಿಸಿದರು.
ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ 37 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಹಾಯಕ ಠಾಣಾಧಿಕಾರಿಯಾಗಿ ಉಮಾನಾಥ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ನಂತರ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸ್ ನೌಕರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮುಂಜಾಗುರು ಕತೆ ಮತ್ತು ಶಿಸ್ತನ್ನು ಅಳವಡಿಸಿಕೊಂಡಲ್ಲಿ ಮಾತ್ರ ಶಾಂತಿ ಕಾಪಾಡಲು ಸಾಧ್ಯ ಎಂದರು.
ಇಂದಿನ ಯುವಕರಿಗೆ ನಿವೃತ್ತಿ ಹೊಂದಿದ ಉಮಾನಾಥ್ರವರ ಮಾರ್ಗದರ್ಶನ ಅಗತ್ಯವಿದ್ದು, ಸಮಯ ಸಿಕ್ಕಾಗ ಬಿಡುವು ಮಾಡಿಕೊಂಡು ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಠಾಣಾಧಿಕಾರಿ ಅನಂತ ಪದ್ಮನಾಬ್ ಮಾತನಾಡಿ, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೇ, ಪೊಲೀಸ್ ಇಲಾ ಖೆಗೆ ಪೇದೆಯಾಗಿ ಪ್ರಥಮವಾಗಿ ಮೂಡಿಗೆರೆ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸಿ ನಂತರ ಮುಂಬಡ್ತಿ ಹೊಂದಿ ಸಹಾಯಕ ಠಾಣಾಧಿಕಾರಿಯಾಗಿ ಮೂಡಿಗೆರೆಯಲ್ಲೇ ನಿವೃತ್ತಿ ಹೊಂದಿದ ಉಮಾನಾಥ ಅವರ ಕಾರ್ಯ ವೈಕರಿ ಕುರಿತು ವಿವರಿಸಿದರು.
ಸನ್ಮಾನ ಸ್ವೀಕರಿಸಿದ ಉಮಾನಾಥ್ ಮಾತನಾಡಿ, ವೃತ್ತಿಯ ಸಮಯದಲ್ಲಿ ನೋವು- ನಲಿವನ್ನು ಸಮಾನವಾಗಿ ಸ್ವೀಕರಿಸಿದಲ್ಲಿ ಏನನ್ನು ಬೇಕಾದರೂ ಮಾಡಲು ಸಾಧ್ಯ ಎಂದರು.
ಅಪರಾಧ ವಿಭಾಗದ ಠಾಣಾಧಿಕಾರಿ ಸಂಕಪ್ಪಯ್ಯ, ವೇಣು ಸೇರಿದಂತೆ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement