4 ವಿಭಾಗಗಳಿಂದ 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಶಿವಮೊಗ್ಗ: ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ 21ನೇ ಅಖಿಲ ಕರ್ನಾಟಕ ರಾಷ್ಟ್ರೀಯ ಮಕ್ಕಳ ಸಮಾವೇಶ 2013ರ ಅಂಗವಾಗಿ ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಯೋಜನಾ ವರದಿ ಮಂಡನೆ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಿಂದ 10 ಜನ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಗರ ಹಿರಿಯ ವಿಭಾಗದಲ್ಲಿ ಶಿವಮೊಗ್ಗದ ಮೋನಿಕ, ಭದ್ರಾವತಿಯ ರಂಜಿತಾ ಮತ್ತು ಸಾಗರದ ಅಕ್ಷರ ಮತ್ತು ತಂಡ. ನಗರ ಕಿರಿಯ ವಿಭಾಗದಲ್ಲಿ ಭದ್ರಾವತಿಯ ಬಿ.ಎಸ್. ಚೇತನ್ ಕುಮಾರ್, ಪೃಥ್ವಿರಾಜ್ ಮತ್ತು ತಂಡ. ಗ್ರಾಮೀಣ ಹಿರಿಯರ ವಿಭಾಗದಿಂದ ಶಿವಮೊಗ್ಗ ಪೂಜಾ, ದೀಪ, ಪ್ರಮೀಣ್ ಕುಮಾರ್., ರೋಹಿತ್, ವಿನಯ್ ಕುಮಾರ್ ಮತ್ತು ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.