ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಗನವಾಡಿ ಕಟ್ಟಡ ಉದ್ಘಾಟನೆ

Rashmi Kasaragodu
Updated On : 13 Nov 2013, 11:26 am

ತರೀಕೆರೆ: ಜನರು ಎಚ್ಚೆತ್ತರೆ ಕಾಮಗಾರಿ ಸರಿಯಾಗುತ್ತದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಸಮೀಪದ ನಾರಾಣಪುರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಾಣವಾದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಳೆಗಾಲದಲ್ಲಿ ರಸ್ತೆ ಮಾಡಿದರೆ ಬೇಗ ಹಾಳಾಗುತ್ತದೆ. ತಮ್ಮ ಮತ್ತು ಶಾಸಕರ ನಿಧಿಯಿಂದ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು, ಸಂಸತ್ ಕ್ಷೇತ್ರದಲ್ಲಿ ಸುಮಾರು 300 ಹಳ್ಳಿಗಳಿದೆ, ಶಾಸಕರ ಜೊತೆ ಚರ್ಚೆ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ನಾರಾಣಾಪುರ ಗ್ರಾಮದ ಸಂಪರ್ಕ ರಸ್ತೆ ತೀವ್ರ ಕಳಪೆ ಕಾಮಗಾರಿಯಾಗಿದೆ. ರಸ್ತೆ ಹಾಳಾಗಿದೆ, ಹಾಗಾಗಿ ಬಿಲ್ ತಡೆಹಿಡಿಯಲಾಗಿದೆ. ರಸ್ತೆಯನ್ನು ಮರು ಡಾಂಬರೀಕರಣ ಗೊಳಿಸಲಾಗುವುದು, ಸುವರ್ಣ ಗ್ರಾಮ ಯೋಜನೆ ಮಂಜೂರಾಗುತ್ತಿದ್ದ ಹಾಗೆ ನಾರಾಣಾಪುರವನ್ನು ಸುವರ್ಣ ಗ್ರಾಮ ಯೋಜನೆ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಶಾಂತ ಗುರುಮೂರ್ತಿ, ಗ್ರಾಪಂ ಅಧ್ಯಕ್ಷೆ ಭಾಗ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಗಂಗಾಧರಪ್ಪ, ಮಂಜುನಾಥ್, ರಾಮಚಂದ್ರಪ್ಪ, ಗ್ರಾಮಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement