ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಡಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧ: ಗಿರಿ ಭರವಸೆ

Rashmi Kasaragodu
Updated On : 13 Nov 2013, 11:41 am

ಹೊಸನಗರ: ಅಡಕೆ ಬೆಳೆಗಾರರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವರ ಹಿತರಕ್ಷಣೆಗೆ ಆಪ್ಕೋಸ್ ಬದ್ಧವಾಗಿದೆ ಎಂದು ಸಾಗರ ಆಪ್ಕೋಸ್ ಅಧ್ಯಕ್ಷ ಆರ್.ಎಸ್.ಗಿರಿ ಭರವಸೆ ನೀಡಿದರು.
ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ತಾಲೂಕಿನ ನಿಟ್ಟೂರು ಶಾಖೆಗೆ ಭೇಟಿ  ನೀಡಿ ಅಡಕೆ ಬೆಳೆಗಾರರೊಂದಿಗೆ ಸಮಾಲೋಚನೆ ನಡೆಸಿ, ಆಪ್ಕೋಸ್ ಮೂಲ ಆಶಯಕ್ಕೆ ತೊಂದರೆಯಾಗದಂತೆ ರೈತರಿಗೆ ಇನ್ನಷ್ಟು ಹತ್ತಿರವಾಗುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಹೊಸನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ 1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ಬೆಳೆಗಾರರ ಸೇವೆಗೆ ಮುಕ್ತಗೊಳ್ಳಲಿದೆ. ಆಪ್ಕೋಸ್ ಹಂತ ಹಂತವಾಗಿ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಪ್ರಸಕ್ತ 40 ಕೋಟಿ ವಹಿವಾಟು ಸಾಧಿಸಿದೆ ಎಂದರು.
ನೂತನ ಸದಸ್ಯ ಎ.ಒ. ರಾಮಚಂದ್ರ ಮಾತನಾಡಿ, ಅಡಕೆ ಕೃಷಿಗೆ ಪೂರಕ ಸಾಮಗ್ರಿಗಳನ್ನು ಮೂಲ ಬೆಲೆಯಲ್ಲಿ ಬಳಕೆದಾರರಿಗೆ ದೊರೆಯುವಂತಾಗಬೇಕು. ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸಬೇಕು. ಸಾಲ ಮತ್ತು ಮುಂಗಡದ ಬಡ್ಡಿ ಕಡಮೆ, ಅಡಕೆ ಸುಲಿಯುವ ಯಂತ್ರಕ್ಕೆ ಸಹಾಯಧನ ಸೇರಿದಂತೆ ಹಲವು ಬೇಡಿಕೆ  ಈಡೇರಿಕೆಗೆ ಸದಸ್ಯರ ಪರವಾಗಿ ಮನವಿ ಮಾಡಿದರು.
ಅಭಿನಂದನೆ: ಮಾಜಿ ನಿರ್ದೇಶಕ ಹಿರಿಯ ಕೃಷಿಕ ಕೆ. ಸುಬ್ರಾವ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಅಲ್ಲದೆ ನೂತನವಾಗಿ ಈ ಭಾಗದಿಂದ ಆಯ್ಕೆಯಾದ ನಿರ್ದೇಶಕ ಎಚ್.ಬಿ. ಕಲ್ಯಾಣಪ್ಪ ಗೌಡ, ಎ.ಒ. ರಾಮಚಂದ್ರರನ್ನು ಅಭಿನಂದಿಸಲಾಯಿತು.
ನಿರ್ದೇಶಕ ಸೂರ್ಯನಾರಾಯಣ ಖಂಡಿಕಾ, ರಾಘವೇಂದ್ರ, ಇಂದೂಧರ್, ಸೀತರಾಮಯ್ಯ, ಮಂಜಪ್ಪ, ದೇವಾಂಗನಿ, ನಾಗರತ್ನ, ಪ್ರಮುಖರಾದ ಜಯಶೀಲಪ್ಪಗೌಡ, ಬಿ.ಎನ್. ಗುರುಮೂರ್ತಿ, ಗಾಂಜಾಳ ರಾಮಚಂದ್ರರಾವ್, ಕೊಳಕಿ ಲಕ್ಷ್ಮೀನಾರಾಯಣ, ಹರಿಯಪ್ಪ, ಜಿ.ಎಸ್. ಸುಬ್ರಹ್ಮಣ್ಯ ಸ್ಥಳೀಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement