ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕನ್ನಡತನ ಜಾಗೃತಗೊಂಡಾಗ ಭಾಷೆ ಬೆಳೆಯುತ್ತದೆ'

Rashmi Kasaragodu
Updated On : 13 Nov 2013, 11:29 am

ಕ.ಪ್ರ.ವಾರ್ತೆ, ತರೀಕೆರೆ.ನ.12
 ಮನ-ಮನೆಗಳಲ್ಲಿ ಕನ್ನಡತನ ಜಾಗೃತಗೊಂಡಾಗ ಭಾಷೆ ಉಳಿಯಲು ಮತ್ತು ಬೆಳೆಯಲು ಸಾಧ್ಯವಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಪಲ್ಲವಿ ತಿಳಿಸಿದ್ದಾರೆ
 ಅವರು, ಮಂಗಳವಾರ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಶಶಿಕಲಾ ವಠಾರದಲ್ಲಿ ರಾಜ್ಯೋತ್ಸವ-ನಿತ್ಯೋತ್ಸವ ಕಾರ್ಯಕ್ರಮದ ಉದ್ಗಾಟನೆ ನರವೇರಿಸಿ ಮಾತನಾಡುತ್ತಿದ್ದರು.
 ಆಂಗ್ಲ ಬಾಷೆ ಕೇವಲ ಪಟ್ಟಣ ಪ್ರದೇಶಗಳಿಗೆ ಮಾತ್ರವೇ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಕಬಂದ ಬಾಹುಗಳನ್ನು ಚಾಚಿದ್ದು, ಆದರ ಸಮ್ಮೋಹನಕ್ಕೆ ಒಳಗಾಗಿ ಗ್ರಾಮೀಣ ಸೊಗಡು ಸಂಸ್ಕೃತಿ ನಾಶಗೊಳ್ಳುತ್ತಿರುವುದು  ಆತಂಕಕಾರಿ ಬೆಳವಣಿಯಾಗಿದೆ ಎಂದರು.
ಸುತ್ತೋಲೆ ಕನ್ನಡದಲ್ಲಿರಲಿ: ಪುರಸಭೆ ಸದಸ್ಯ ಈರಣ್ಣ ಅವರು ಮಾತನಾಡಿ ಸರ್ಕಾರದ ಸುತ್ತೋಲೆ, ಆದೇಶಗಳು, ಕಾನೂನು ಪುಸ್ತಕಗಳು ಕನ್ನಡದಲ್ಲಿ ಇರುವಂತಾಗಬೇಕು, ನ್ಯಾಯಾಲಯದಲ್ಲಿ ಕನ್ನಡ ಜಾರಿಗೆ ಬರುವ ನಿಟ್ಟಿನಲ್ಲಿ  ಕನ್ನಡ ಸಾಹಿತ್ಯ ಪರಿಷತ್ ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದು ತಿಳಿಸಿದರು.
 ಹೋಬಳಿ ಕಸಾಪ ಅಧ್ಯಕ್ಷ ಎನ್.ವೆಂಕಟೇಶ್ ಅವರು ಮಾತನಾಡಿ ಬಾಷೆ ಬೆಳವಣಿಗೆ ಕೇವಲ ಸಭೆ ಸಮಾರಂಭಗಳಿಂದ ಸಾಧ್ಯವಿಲ್ಲ, ಎಂದು ತಿಳಿಸಿದರು.
 ಪುರಸಭೆ ಸದಸ್ಯ ನಾಗರಾಜ್, ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ, ಶಶಿಕಲಾ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement