ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಚಿಂತನಾಶೀಲ ಮನೋಭಾವ ಬೆಳೆಸಿಕೊಳ್ಳಿ'

Rashmi Kasaragodu
Updated On : 13 Nov 2013, 11:28 am

ಬೀರೂರು: ತಮ್ಮ ಶೈಕ್ಷಣಿಕ ಪಠ್ಯ ಪುಸ್ತಕದ ಜೊತೆ ಮಕ್ಕಳು ಚಿಂತನಾಶೀಲತೆ ಹಾಗೂ ಆವಿಷ್ಕಾರದ ಮನೋಭಾವ ಬೆಳೆಸಿಕೊಂಡಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಜಿ.ಪ. ಸದಸ್ಯ ಬಿ.ಪಿ. ನಾಗರಾಜ್ ಹೇಳಿದರು.
ಬೀರೂರಿನ ಗುರುಭವನದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಫ್ರೌಢಶಾಲೆಗಳ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ದೊರತಿರುವ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ವೈಜ್ಞಾನಿಕ ಆಸಕ್ತಿಯನ್ನು ಬಳೆಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
 ಅಧ್ಯಕ್ಷತೆ ವಹಿಸಿದ್ದ ಶಿಕ್ಷಣಾಧಿಕಾರಿ ಮೋಹನ ಕುಮಾರ್ ಮಾತನಾಡಿ, ಸರ್ಕಾರ ಮಕ್ಕಳ ಜ್ಞಾನವಿಕಾಸಕ್ಕೆ ಬೇಕಾದ ಎಲ್ಲ ಪೂರಕ ಸೌಲಭ್ಯಗಳನ್ನು ಕಲ್ಪಿಸಿದ್ದು ಪ್ರಗತಿ ಶೀಲ ರಾಷ್ಟ್ರವಾದ ಭಾರತ ವೈಜ್ಞಾನಿಕವಾಗಿ ಪ್ರಗತಿ ಸಾಧಿಸುವಲ್ಲಿ ನಮ್ಮ ವಿಜ್ಞಾನಿಗಳು ಸಾಧಿಸಿರುವ ಸಾಧನೆಯು ಯುವ ಪೀಳಿಗೆಗೆ ಮಾರ್ಗದರ್ಶಕವಾಗಬೇಕು ಎಂದರು. ಪುರಸಭಾ ಸದಸ್ಯ ಎಸ್.ಎಸ್. ದೇವರಾಜ್, ಶಿಕ್ಷಣ ಇಲಾಖೆಯ ಜಯಾನಂದ್, ಮಹೇಂದ್ರಕುಮಾರ್, ಮಲ್ಲಪ್ಪ, ಮುಖ್ಯೋಪಾಧ್ಯಾಯ ಜಯಣ್ಣ, ರಾಮಪ್ಪ, ಪರಿಸರ ಸಂಪನ್ಮೂಲ, ವಿಜ್ಞಾನ ಸಮುದಾಯ ಆರೋಗ್ಯ, ಸೌರಶಕ್ತಿ, ಸಾವಯವ ಹಾಗು ಜೈವಿಕ ಕೃಷಿ ಹಾಗೂ ಇನ್ನಿತರ ಸಂಶೋಧನೆಗಳ ಮಾದರಿ ಮಕ್ಕಳ ಹಾಗೂ ಪೋಷಕರ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement