ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದಂಡಶುಲ್ಕದೊಂದಿಗೆ ಪ್ರವೇಶಾತಿ ಅವಧಿ ವಿಸ್ತರಣೆ

Rashmi Kasaragodu
Updated On : 13 Nov 2013, 11:26 am

ಚಿಕ್ಕಮಗಳೂರು: ರಾಜ್ಯ ಮುಕ್ತ ವಿವಿ ವತಿಯಿಂದ 2013-14ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾದೇಶಿಕ ಕೇಂದ್ರ ಐ.ಟಿ.ಐ. ಕ್ಯಾಂಪಸ್, ಕೆ.ಎಂ.ರಸ್ತೆ, ಚಿಕ್ಕಮಗಳೂರು ಇಲ್ಲಿ ವಿವಿಧ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಾಲಾತಿ ಹಾಗೂ ನಿಗದಿತ ಶುಲ್ಕವನ್ನು ಬ್ಯಾಂಕ್ನಲ್ಲಿ ಜಮಾ ಮಾಡಿ ವಿವಿಧ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ಪಡೆಡಯಬಹುದಾಗಿದೆ. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಸಿದ್ದಪಾಠಗಳನ್ನು ವಿತರಿಸಲಾಗುತ್ತದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ವಿದ್ಯಾರ್ಥ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ. 25 ರಿಯಾಯಿತಿ ನೀಡಲಾಗುತ್ತಿದೆ. ಎಸ್ಸೆಸೆಲ್ಸಿ ಅಥವಾ ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ 18 ವರ್ಷ ತುಂಬಿದ ಯಾವುದೇ ವ್ಯಕ್ತಿ ಬಿ.ಎ., ಬಿ.ಕಾಂ.ಗೆ ನೇರವಾಗಿ ಪ್ರವೇಶಾತಿ ಪಡೆಯಬಹುದು. 200 ದಂಡಶುಲ್ಕದೊಂದಿಗೆ ಪ್ರವೇಶಾತಿ ಪಡೆಯಲು ಪ್ರಥಮ ಬಿಎ, ಬಿಕಾಂ ನವರಿಗೆ ನ. 18, ದ್ವಿತೀಯ ಬಿ.ಎ, ಬಿ.ಕಾಂ ನವರಿಗೆ ನ.21 ಹಾಗೂ ಪ್ರಥಮ ಎಂಎ, ಎಂ.ಕಾಂ.ನವರಿಗೆ ನ.19, ಎಲ್ಎಲ್ಎಂ, ಎಂಬಿಎ-ಲಾ, ಬಿಎಲ್ಐಎಸ್ಸಿ, ಎಂಎಲ್ಐಎಸ್ಸಿ, ಡಿಪ್ಲೋಮಾ ಕೋರ್ಸ್ಗೆ ನ.15 ರವರೆಗೆ ಅವಧಿ ವಿಸ್ತರಿಸಲಾಗಿದೆ. ರು. 400 ದಂಡ ಶುಲ್ಕದೊಂದಿಗೆ ಪ್ರವೇಶಾತಿ ಪಡೆಯಲು ಅಂತಿಮ ಎಂಎ, ಎಂ.ಕಾಂ.ನವರಿಗೆ ಡಿ.5, ಅಂತಿಮ ಬಿ.ಎ., ಬಿ.ಕಾಂ.ನವರಿಗೆ ನ. 29, ಎಂ.ಎಸ್ಸಿ ಕೋರ್ಸ್ನವರಿಗೆ ಡಿ. 12 ರವರೆಗೆ ಅವಧಿ ವಿಸ್ತರಿಸಲಾಗಿದೆ. ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಜಗದೀಶ್, ಐಟಿಐ ಕ್ಯಾಂಪಸ್, ಕೆ.ಎಂ.ರಸ್ತೆ, ಚಿಕ್ಕಮಗಳೂರು  ಸಂಪರ್ಕಿಸಲು ತಿಳಿಸಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement