ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜೀವ ಗಾಂಧಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

Rashmi Kasaragodu
Updated On : 13 Nov 2013, 11:25 am

ಶೃಂಗೇರಿ: ಉತ್ತರ ಕನ್ನಡದ ಶಿರಸಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆದ ರಾಜ್ಯ ಮಟ್ಟದ ಸಂಸ್ಕೃತೋತ್ಸವದಲ್ಲಿ ಸಂಸ್ಕೃತ ಶಾಸ್ತ್ರಭಾಷಣ ಸ್ಪರ್ಧೆಯಲ್ಲಿ ಶೃಂಗೇರಿ ಮೆಣಸೆ ರಾಜೀವ ಗಾಂಧಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳು 13 ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಶಶಾಂಕ ಸಾರಂಗ (ವ್ಯಾಕರಣ), ವಿರಂಜನ ಭಟ್ (ವೇದಾಂತ), ಸೂರ್ಯ ಹೆಬ್ಬಾರ್ (ಸಾಹಿತ್ಯ), ನಾಗಪತಿ (ಜ್ಯೋತಿಷ್ಯ), ಗೋವಿಂದ ಹೆಗಡೆ (ಮೀಮಾಂಸೆ), ಪ್ರಜ್ವಲ್ (ಸಂಖ್ಯಾಯೋಗ), ಪ್ರಶಾಂತ ಗಾಂವ್ಕರ್ (ಮೀಮಾಂಸೆ), ಸೂರ್ಯಹೆಬ್ಬಾರ್ ಸಮಸ್ಯಾ ಪೂರ್ತಿ, ಶ್ಲೋಕ ಅಂತ್ಯಾಕ್ಷರಿ)ನಿರಂಜನ ಭಟ್ (ಸಂಖ್ಯಾಯೋಗ), ಕೃಷ್ಣಮೂರ್ತಿ ಹೆಗ್ಡೆ (ವೇದಾಂತ), ದಯಾನಂದ (ಜ್ಯೋತಿಷ್ಯ) ಪ್ರಶಸ್ತಿ ಪಡೆದವರಾಗಿದ್ದಾರೆ.ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥಾನದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಪ್ರಶಸ್ತಿ ವಿತರಿಸಿ ಆಶೀರ್ವಚಿಸಿದರು. ರಾಷ್ಟ್ರೀಯ ಸಂಸ್ಕ್ರತ ಸಂಸ್ಥಾನದ ಕುಲಪತಿ ಪ್ರೊ.ಎ.ಪಿ. ಸಚ್ಚಿದನಾಂದ ಉಡುಪ ಮತ್ತಿತರರು ಉಪಸ್ಥಿತರಿದ್ದರು.ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ವಿಜೇತರಾದ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯ ಎನ್.ಆರ್. ಕಣ್ಣನ್, ಭೋದಕ ವರ್ಗ, ಭೋದಕೇತರ ವರ್ಗ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement