2.50 ಲಕ್ಷ ಮೌಲ್ಯದ ಮದ್ಯ ನಾಶ
ಚಿಕ್ಕಮಗಳೂರು: ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಸುಮಾರು 2.50 ಲಕ್ಷ ಮೌಲ್ಯದ ಮದ್ಯವನ್ನು ನಗರದ ಅಬಕಾರಿ ವಲಯ ಕಚೇರಿಯಲ್ಲಿ ನಾಶಪಡಿಸಲಾಯಿತು.
ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ದಾಖಲಾದ ಸುಮಾರು 103 ಪ್ರಕರಣಗಳಿಂದ 285.30 ಲೀಟರ್ ಮದ್ಯವನ್ನು ಕಂದಾಯ ಮತ್ತು ಪೊಲೀಸರ ಸಮ್ಮುಖದಲ್ಲಿ ಅಬಕಾರಿ ಸಿಬ್ಬಂದಿಗಳು ಕಾನೂನಿನ ಪ್ರಕಾರ ನಾಶ ಮಾಡಿದರು.
3089 ಲೀ. ಬೆಲ್ಲದ ಕೊಳೆ ಹಾಗೂ 575.460 ಲೀ. ಮದ್ಯ, 9.470 ಲೀ. ಬೀಯರ್ ಕೇಸ್ಗಳನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕಾನೂನಿನ ಚೌಕಟ್ಟಿನಡಿಯಲ್ಲಿ ಅಬಕಾರಿ ಸಿಬ್ಬಂದಿಗಳು ನಾಶ ಪಡಿಸುವ ಮೂಲಕ ಇಲಾಖಾ ಪ್ರಕ್ರಿಯೆ ನಡೆಸಿದರು.
ಅಬಕಾರಿ ಉಪಾಧೀಕ್ಷಕ ಎಂ. ಮಹದೇವ್, ತಹಸೀಲ್ದಾರ್ ಶಿವೇಗೌಡ ಹಾಗೂ ಇಲಾಖೆಯ ಸಿಬ್ಬಂದಿಗಳು ನಗರದ ಕೋಟೆ ಬಡಾವಣೆಯಲ್ಲಿರುವ ವಲಯ ಅಬಕಾರಿ ಕಚೇರಿಯಲ್ಲಿ ಬುಧವಾರ ಮದ್ಯ ನಾಶಪಡಿಸಲಾಯಿತು