ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಕಾಫಿ' ಸಮಸ್ಯೆಗೆ ಬ್ರೆಜಿಲ್ ತಜ್ಞರ ಪರಿಹಾರ

Rashmi Kasaragodu
Updated On : 14 Nov 2013, 12:13 pm

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಬೆಳೆಗಳ ರೈತರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸೂಚಿಸಲು ಬ್ರೆಜಿಲ್ನಿಂದ ನುರಿತ ತಜ್ಞರ ತಂಡ ರಾಜ್ಯಕ್ಕೆ ಆಗಮಿಸಲಿದೆ ಎಂದು ರಾಜ್ಯ ಕೃಷಿಕರ ಸಂಘದ ಅಧ್ಯಕ್ಷ  ನಿಶಾಂತ್ ಆರ್. ಗುರ್ಜರ್ ತಿಳಿಸಿದರು.
ಬುಧವಾರ ನಗರದ ಹೊಟೇಲೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ರಾಜ್ಯ ಕೃಷಿಕರ ಸಂಘ(ಕೆಪಿಎ-ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್)ದ 55ನೇ ಸಮ್ಮೇಳನ ಬೆಂಗಳೂರಿನ ಏಟ್ರಿಯಾ ಹೊಟೇಲ್ನಲ್ಲಿ ನ.14-15ರಂದು ನಡೆಯಲಿದೆ.
ಸಮ್ಮೇಳನಕ್ಕೆ ಬ್ರೆಜಿಲ್ನ ನುರಿತ ತಜ್ಞರನ್ನು ಆಹ್ವಾನಿಸಿದ್ದು, ಅವರು ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸಲಿದ್ದಾರೆ ಎಂದರು.
ಕಾಫಿ, ಟೀ ಸೇರಿ ವಾಣಿಜ್ಯ ಬೆಳೆಗಳ ಉತ್ಪಾದನೆಯಲ್ಲಿ ಬ್ರೆಜಿಲ್ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಭಾರತ ಆರನೇ ಸ್ಥಾನದಲ್ಲಿದ್ದು, ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್ ಸೇರಿ ಸಾಕಷ್ಟು ರಾಷ್ಟ್ರಗಳಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ.
 ಹೊಸ ತಳಿಗಳ ಆವಿಷ್ಕಾರವಾಗಿದೆ. ಆದರೆ, ರಾಜ್ಯದಲ್ಲಿ ಜೈವಿಕ ತಂತ್ರಜ್ಞಾನ ಮುಂದುವರಿದಿಲ್ಲ ಹಾಗೂ ಹೊಸ ತಳಿಗಳಿಗೆ ಆದ್ಯತೆ ಸಿಕ್ಕಿಲ್ಲ. ಮತ್ತೊಂದೆಡೆ ರಸಗೊಬ್ಬರದ ಕೊರತೆ ಇದ್ದು, ಇದರಿಂದ ಇಳುವರಿಯಲ್ಲಿ ಸಾಕಷ್ಟು ಹಿನ್ನಡೆಯಾಗುತ್ತಿದೆ. ಹೀಗಿದ್ದರೂ ಚಿಕ್ಕಮಂಗಳೂರಿನಿಂದ ಶೇ.70ರಷ್ಟು ಕಾಫಿ ಉತ್ಪಾದನೆಯಾಗುತ್ತದೆ. ಉಳಿದಂತೆ ಕೊಡಗು ಹಾಗೂ ಹಾಸನದ ರೈತರು ಈ ಬೆಳೆಗಳನ್ನು ಬೆಳೆಯುತ್ತಾರೆ ಎಂದರು.
ಸಮ್ಮೇಳನದಲ್ಲಿ ಹಾಸನ, ಕೊಡಗು ಹಾಗೂ ಚಿಕ್ಕಮಂಗಳೂರಿನ ಸುಮಾರು 350 ಮಂದಿ ರೈತರು ಭಾಗವಹಿಸಲಿದ್ದಾರೆ ಎಂದರು.
  ಕರ್ನಾಚಕ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಗೋವಿಂದಪ್ಪ ಜಯರಾಂ, ಉಪಾಸಿ(ಯುಪಿಎಎಸ್ಐ - ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ)ಯ ಅಧಿಕಾರಿಗಳಾದ ಉಲ್ಲಾಸ್ ಮೆನನ್, ವಿಜಯನ್ ರಾಜೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement