ಬೇಸಾಯ, ಸಾವಯವ ಕೃಷಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಕೊಪ್ಪ: ತೋಟಗಾರಿಕೆ ಇಲಾಖೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಲ್ಲಿ 2013-14ನೇ ಸಾಲಿನ ಸಂರಕ್ಷಿತ ಬೇಸಾಯ ಹಾಗೂ ಸಾವಯವ ಕೃಷಿಗೆ ಸಹಾಯಧನ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ತಿಳಿಸಿದ್ದಾರೆ.
ಸಂರಕ್ಷಿತ ಬೇಸಾಯದ ಯೋಜನೆಯಡಿಯಲ್ಲಿ ಗರಿಷ್ಠ 1000 ಚ.ಮೀ. ನ ಸಾಮಾನ್ಯ ಹಸಿರು ಮನೆ ನಿರ್ಮಾಣಕ್ಕೆ ಪ್ರತಿ ಚ.ಮೀ 467.50 ರಂತೆ ಹಾಗೂ ಗರಿಷ್ಠ 1000 ಚ.ಮೀ. ನೆರಳು ಪರದೆಗೆ ಪ್ರತಿ ಚ.ಮೀ. 300 ರಂತೆ ಸಹಾಯಧನ ನೀಡಲಾಗುವುದು.
ಸಾವಯವ ಕೃಷಿಗೆ ಬಯೋಡೈಜೆಸ್ಟರ್ ದೊಡ್ಡ ತೊಟ್ಟಿ ನಿರ್ಮಾಣಕ್ಕೆ ಶೇ.50ರ ಸಹಾಯ ಧನದಂತೆ 30,000 ನೀಡಲಾಗುವುದು. ಎರೆಹುಳು ತೊಟ್ಟಿ 20ಣ4ಣ2 ಅಡಿ ಅಳತೆಯ 8 ಸಿಮೆಂಟ್ ತೊಟ್ಟಿ ಹಾಗೂ ಮೇಲ್ಚಾವಣಿಗೆ ಶೇ.50 ಸಹಾಯ ಧನದಂತೆ 30,000 ಸಾವಿರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯ 08265 221104 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.