'ಅಧುನಿಕ ಭರಾಟೆಯಲ್ಲಿ ಗ್ರಾಮೀಣ ಸೊಗಡು ಮರೆ'
ಬಾಳೆಹೊನ್ನೂರು: ಅಧುನಿಕ ಭರಾಟೆಯಲ್ಲಿ ಗ್ರಾಮೀಣ ಸೊಗಡು ಮರೆಯಾಗುತ್ತಿದ್ದು, ಅದನ್ನು ಉಳಿಸುವಲ್ಲಿ ಯುವಜನಾಂಗ ಮುಂದಾಗಬೇಕು ಎಂದು ಜನಪದ ಕಲಾವಿದ ಸತೀಶ್ಸ್ವಾಮಿ ಹೇಳಿದ್ದಾರೆ.
ಸಮೀಪದ ಖಾಂಡ್ಯ ಹೋಬಳಿಯ ಬಿಳಗೊಳದ ಕೃಷಿಕ ಜಯಂತಿ ಮುಳ್ಳೇಶ್ಗೌಡರ ಮನೆಯಲ್ಲಿ ಹಮ್ಮಿಕೊಂಡಿದ್ದ ಅಂಟಿಗೆ ಪಂಟಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕು ಹಾಗೂ ಮಲೆನಾಡಿನ ಸಂಸ್ಕೃತಿಯ ಪರಂಪರೆ ಅಂಟಿಗೆ ಪಂಟಿಗೆ ಕಲೆಯಲ್ಲಿ ಅಡಗಿದೆ. ಅದನ್ನು ಮುಂದಿನ ಪೀಳಿಗಾಗಿ ಉಳಿಸಬೇಕಾಗಿದೆ ಎಂದರು.
ಪ್ರೋತ್ಸಾಹ ಅಗತ್ಯ: ಬಾಳೆಹೊನ್ನೂರು ಕರವೇ ಗೌರವಾಧ್ಯಕ್ಷ ನಾಗರಾಜ್ ಮಾತನಾಡಿ, ದೀಪಾವಳಿ ಸಂದರ್ಭದಲ್ಲಿ ಗ್ರಾಮೀಣ ಜನರನ್ನು ಸಂಘಟಿಸುವ ಶಕ್ತಿ ಈ ಕಲೆಗಿದ್ದು, ಗ್ರಾಮೀಣ ಬದುಕಿನ ಜೀವನಾಡಿಯಾದ ಅಂಟಿಗೆ ಪಂಟಿಗೆ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಸಂಘ ಸಂಸ್ಥೆಗಳ ಜವಾಬ್ದಾರಿ. ಮಹಿಳೆಯರು ಹೆಚ್ಚು ದೃಶ್ಯ ಮಾಧ್ಯಮಗಳಿಗೆ ಮಾರುಹೋಗದೇ ಅಂಟಿಗೆ ಪಂಟಿಗೆ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸ ಬೇಕೆಂದರು. ಕಲಾವಿದರು ಜ್ಯೋತಿ ಬೆಳಗಿಸಿ ಕೃಷಿಕ ಮುಳ್ಳೇಶ್ ಗೌಡರ ಮನೆಗೆ ಬಂದಾಗ ದಂಪತಿಗಳು ಜ್ಯೋತಿ ಹಾಗೂ ಕಲಾವಿದರನ್ನು ಬರಮಾಡಿಕೊಂಡರು. ಕಲಾವಿದರಾದ ಸ್ವಾಮಿ, ಮಲ್ಲಪ್ಪ, ಹಾಲಪ್ಪ, ಮನು, ಅಭಿಷೇಕ್, ಜೀವನ್, ಶರತ್, ಚಂದ್ರಶೇಖರ್, ಸಂದೀಪ್ ಹಾಗೂ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಅರ್ಚನಾ,ಅಕ್ಷತಾ ಉಪಸ್ಥಿತರಿದ್ದರು.