ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭದ್ರಾ ಮೇಲ್ದಂಡೆ: ಪರಿಹಾರಕ್ಕೆ ರೈತರ ಅಗ್ರಹ

Mainashree
Updated On : 15 Nov 2013, 3:30 am

ತರೀಕೆರೆ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ರೈತರಿಗೆ ಕೊಡಬೇಕಾದ ಪರಿಹಾರ ಹಣವನ್ನು ಕೂಡಲೇ ಕೊಡಿಸಿಕೊಡಬೇಕೆಂದು ಬಿ.ಎಸ್.ಮಲ್ಲಿಕಾರ್ಜುನ್, ಬರಗೇನಹಳ್ಳಿ ಮತ್ತು ರೈತರುಗಳು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಪತ್ರ ನೀಡಿ ಆಗ್ರಹಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಪ್ರಾರಂಭದಿಂದಲೂ ತಾಲೂಕಿನ ರೈತರು ಬೇಡವೇ ಬೇಡವೆಂದು ಹೋರಾಟ ಮಾಡಿದರೂ ಸಹ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ. ಆದರೆ ರೈತರಿಗೆ ಕೊಡುವ ಪರಿಹಾರ ಹಣವನ್ನು ನೀಡುತ್ತಿಲ್ಲ. ರೈತರ ಕೂಗನ್ನು ಕಷ್ಟವನ್ನು ಪರಿಹರಿಸಿಕೊಳ್ಳಲು ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇವೆ ಆದರೂ ಆಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
 ಲಕ್ಕವಳ್ಳಿ ಹೋಬಳಿ, ಶಾಂತಿಪುರ ಸರ್ವೆನಂಬರ್ 75ರಲ್ಲಿ ಪೂರ್ಣ ಜಮೀನನ್ನು ಸಂಪೂರ್ಣ ಸ್ವಾಧೀನ ಪ್ರಕ್ರಿಯೆ ಆಗದೆ ಹಣ ಕೊಡದೇ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ. ಈ ಮನವಿಗೂ ತಾವು ಮನ್ನಣೆ ಕೊಡದಿದ್ದಲ್ಲಿ ತಾವೇ ನೇರವಾಗಿ ರೈತರು ಹೋರಾಟ ಮಾಡಲು ಅವಕಾಶಮಾಡಿಕೊಟ್ಟಂತಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement