ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶ್ರವಣ ಸಾಧನ ಅಳವಡಿಕೆಗೆ ಸ್ಥಳ ನಿಗದಿ

Mainashree
Updated On : 15 Nov 2013, 11:42 am

ಚಿಕ್ಕಮಗಳೂರು:ಅಮೆರಿಕದ ಸ್ಟಾರ್ ಕೀ ಫೌಂಡೇಶನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲೆಯ 74 ವಿದ್ಯಾರ್ಥಿಗಳಿಗೆ ಉಚಿತವಾಗಿ ಶ್ರವಣ ಸಾಧನವನ್ನು ನ.17ರಂದು ಬೆಂಗಳೂರಿನ ಹೋಟೆಲ್ ಅಶೋಕದಲ್ಲಿ (ಲಲಿತ ಮಹಲ್) ವಿತರಿಸಲಾಗುವುದು.
ಈ ಕಾರ್ಯಕ್ರಮವನ್ನು ನ.17ರಂದು ಬೆಳಗ್ಗೆ 6 ಗಂಟೆಗೆ ಬಸ್ಸಿನಲ್ಲಿ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಬೇಕಾದ ಕಾರಣ ಸಾಧನವನ್ನು ಉಪಯೋಗ ಪಡೆಯುವಂತಹ ಪ್ರತಿಯೊಬ್ಬ ಅಭ್ಯರ್ಥಿಯು ಅಂದು ಬೆಳಗ್ಗೆ 6 ಗಂಟೆಗೆ ಮುಂಚಿತವಾಗಿ ನಗರದ ಬೇಲೂರು ರಸ್ತೆಯ ಜೂನಿಯರ್ ಕಾಲೇಜು ಗೇಟಿನ ಪಕ್ಕದಲ್ಲಿ ತಮ್ಮ ಶಿಕ್ಷಕರೊಂದಿಗೆ ಸೂಕ್ತ ವ್ಯವಸ್ಥೆಯೊಂದಿಗೆ ತಯಾರಾಗಬೇಕಾಗಿ ಕೋರಲಾಗಿದೆ. ಮಾಹಿತಿಗೆ   ಮೊ- 9448186237, ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement