ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಹಕಾರ ಸಂಸ್ಥೆಯಲ್ಲಿ ರಾಜಕೀಯವಿಲ್ಲ

Mainashree
Updated On : 15 Nov 2013, 3:31 am

ಮೂಡಿಗೆರೆ: ಜನರಿಂದ ಜನರಿಗಾಗಿ ಜನರೇ ನಿರ್ಮಿಸಿದ ಸಂಸ್ಥೆ ಸಹಕಾರ ಸಂಸ್ಥೆಯಾಗಿದ್ದು, ಇದರಲ್ಲಿ ರಾಜಕೀಯ ಹೊರತಾಗಿದೆ ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್,  ಚಿಕ್ಕಮಗಳೂರು ತಾಲೂಕು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಮೂಡಿಗೆರೆ ಹಾಗೂ ಮೂಡಿಗೆರೆ ತಾಲೂಕಿನ ಎಲ್ಲಾ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳ ಸಹಯೋಗದಲ್ಲಿ 60 ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಮೂಡಿಗೆರೆ ತಾಲೂಕಿನಲ್ಲಿ ಸಹಕಾರ ಸಂಘಗಳು ಶೇ100 ವಸೂಲಾತಿಯನ್ನು ಮಾಡುವುದರೊಂದಿಗೆ ಸಾಧನೆ  ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ವಹಿಸಿದ್ದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪನಿರ್ದೇಶಕ ರಂಗಸ್ವಾಮಿ ಮತ್ತು ರಾಜ್ಯ ಸಹಕಾರ ಮಹಾಮಂಡಳ ದ ನಿರ್ದೇಶಕ ಬಿ.ಸಿ. ಲೋಕಪ್ಪಗೌಡ ಉಪನ್ಯಾಸ ನೀಡಿದರು.
ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಆರ್. ರಾಜಶೇಖರ್, ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಎಚ್.ಬಿ. ಶಿವಣ್ಣ, ಎನ್.ಜೆ. ಜಯರಾಮ್, ಎಂ. ವಿ.ಜಗದೀಶ್, ಕೆ.ಎಂ. ಶಿವಕುಮಾರ್, ಡಿ.ಪಿ. ಲೋಕೇಗೌಡ, ಎಸ್.ವಿ.ಬಸವರಾಜಪ್ಪ, ಟಿ. ಕಮಲಾಕ್ಷಿ, ಟಿ.ಎನ್. ಚನ್ನಕೇಶವೇ ಗೌಡ, ಮುತ್ತಪ್ಪ, ಡಿ.ಕೆ. ಗೋಪಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement