ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸುದ್ದಿ ಸಂಕ್ಷೇಪ

Mainashree
Updated On : 15 Nov 2013, 11:43 am

ಸಕಾಲ ಕೇಂದ್ರ ನಿರ್ವಹಣೆಗೆ ಅರ್ಜಿ
ಚಿಕ್ಕಮಗಳೂರು: ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಕೊಪ್ಪ, ಮೂಡಿಗೆರೆ, ಶೃಂಗೇರಿ ಮತ್ತು ಎನ್.ಆರ್. ಪುರ ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯ ಕೇಂದ್ರಗಳನ್ನು ನಿರ್ವಹಿಸಲು ಅರ್ಹ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪದವಿ, ಗಣಕಯಂತ್ರದ ವ್ಯವಹರಿಸುವ ಪರಿಣತಿ ಹೊಂದಿರುವರು ಹಾಗೂ ತಮ್ಮದೇ ಲ್ಯಾಪ್‌ಟಾಪ್, ಡಾಟಾ ಕಾರ್ಡ್, ಪ್ರಿಂಟರ್, ಯುಪಿಎಸ್ ಹಾಗೂ ಸ್ಕ್ಯಾನರ್ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ಮಾಹೆ 10 ಸಾವಿರ ಗೌರವಧನವನ್ನು 6 ತಿಂಗಳವರೆಗೆ ಮಾತ್ರ ನೀಡಲಾಗುವುದು. ಆನಂತರ ಆನ್‌ಲೈನ್ ಸೇವೆಗಳನ್ನು ನೀಡಿ ಸೇವಾ ಶುಲ್ಕ ಪಡೆದು ಸಹಾಯ ಕೇಂದ್ರಗಳನ್ನು ನಿರ್ವಹಿಸುವುದು. ಅರ್ಜಿ ಸಲ್ಲಿಸಲು ನ.19 ಕೊನೆಯ ದಿನ, ಎಸ್. ವರಲಕ್ಷ್ಮೀ ದುರ್ಗಾ, ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರು, ಮೊ- 8123317883 ಸಂಪರ್ಕಿಸಲು ತಿಳಿಸಿದೆ.
ಅಧಿಕಾರ ಸ್ವೀಕಾರ
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಯಾಗಿ ಪಿ.ಎಂ. ಚಂದ್ರಮೌಳೇಶ್ವರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ್ದಾರೆ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯ ಸಭೆ
ಜಿಪಂ ಸಾಮಾನ್ಯ ಸಭೆಯನ್ನು ನ.28 ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಎಸ್. ರೇಖಾ ಹುಲಿಯಪ್ಪಗೌಡ ಅಧ್ಯಕ್ಷತೆಯಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement