21ರಂದು ಜೆಡಿಎಸ್ ಪ್ರತಿಭಟನೆ
ಶೃಂಗೇರಿ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಸಿ ಜೆಡಿಎಸ್ನಿಂದ ನ. 21ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ಆಯೋಜಿಸಲಾಗಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಜಿ.ಜಿ. ಮಂಜುನಾಥ್ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಪಟ್ಟಣದ ಬಸ್ಸು ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ತಾಲೂಕು ಕಚೇರಿ ಎದುರು ಸಮಾವೇಶಗೊಳ್ಳಲಿದೆ. ಗೋರಕ್ ಸಿಂಗ್ ವರದಿ ಅನುಷ್ಠಾನ, ಹಳದಿ ಎಲೆ ರೋಗ ಪರಿಹಾರ ಪ್ಯಾಕೇಜ್ ಬಿಡುಗಡೆ, ರೈತರ ಸಾಲ ಮನ್ನಾ, ಬಿಪಿಎಲ್ ಕಾರ್ಡುದಾರರಿಗೆ ನಿವೇಶನ, ಒತ್ತುವರಿ ಸಮಸ್ಯೆ, ಬಂದೂಕು ಲೈಸನ್ಸ್ ನವೀಕರಣ ತಾರತಮ್ಯ ನೀತಿ, ಶಾದಿಭಾಗ್ಯ ಯೋಜನೆ ಎಲ್ಲಾ ವರ್ಗಗಳಿ ವಿಸ್ತರಣೆ ಇತ್ಯಾದಿ ಬೇಡಿಕೆ ಮುಂದಿಟ್ಟಕೊಂಡು ಹೋರಾಟ ನಡೆಸಲಾಗುವುದು.
ಶಾಸಕ ವೈಎಸ್ವಿ ದತ್ತಾ, ಬಿ.ಬಿ. ನಿಂಗಯ್ಯ, ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಂಜುನಾಥ್ ತಿಳಿಸಿದ್ದಾರೆ.