ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಪೌಷ್ಟಿಕತೆ ನಿರ್ವಹಣೆ ಕಾರ್ಯಕ್ರಮ: ಸಿಡಿಪಿಒ ಶ್ರೀಧರ್

Rashmi Kasaragodu
Updated On : 16 Nov 2013, 11:34 am

ತರೀಕೆರೆ: ಮಕ್ಕಳಲ್ಲಿನ ಅಪೌಷ್ಟಿಕತೆ ಇಂದು ದೇಶದ ಗಂಭೀರ ಸಮಸ್ಯೆಗಳಲ್ಲೊಂದಾಗಿದೆ ಎಂದು ಸಿಡಿಪಿಒ ಶ್ರೀಧರ್ ತಿಳಿಸಿದರು.
ರೋಟರಿ ಸಂಸ್ಥೆ, ಇನ್ನರ್ ವೀಲ್ ಕ್ಲಬ್, ಬಸವೇಶ್ವರ ಆಸ್ಪತ್ರೆ ವತಿಯಿಂದ ರೋಟರಿ ಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತ ಅದರ ನಿರ್ವಹಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಗು ವಯಸ್ಸಿಗೆ ಅನುಗುಣವಾಗಿ ತೂಕ ಮತ್ತು ಎತ್ತರವನ್ನು ಪಡೆಯಲು ಅಗತ್ಯವಿರುವ ಪೌಷ್ಟಿಕಾಂಶದ ಕೊರತೆಯನ್ನು  ಹೊಂದಿರುವುದೇ ಅಪೌಷ್ಟಿಕತೆಯಾಗಿದೆ.
ಇದನ್ನು ಹೋಗಲಾಡಿಸಲು ಕರ್ನಾಟಕ ಸರ್ಕಾರ ಮಕ್ಕಳಿಗೆ ಮೊಟ್ಟೆ, ಹಾಲು ನೀಡುವ ಕಾರ್ಯಕ್ರಮ, ಎರಡು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ಬಾಲಸಂಜೀವಿನಿ ಇತ್ಯಾದಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಮಕ್ಕಳ ಪೋಷಕರು ಇಲಾಖೆ ಜೊತೆ ಕೈಜೋಡಿಸಿದರೆ, ಈ ಸಮಸ್ಯೆಯನ್ನು ಅಲ್ಪಕಾಲದಲ್ಲಿ ಹೋಗಲಾಡಿಸಬಹುದು ಎಂದು ಅವರು ತಿಳಿಸಿದರು.
ಮಕ್ಕಳ ತಜ್ಞ ಡಾ. ದೀಪಕ್ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಜಿ. ತಿಪ್ಪೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ವೀಲ್ ಕ್ಲಬ್ ಕಾರ್ಯದರ್ಶಿ ಮಂಜುಳಾ ಶರತ್, ಸಾವಿತ್ರಮ್ಮ, ಶಿಶು ಅಭಿವೃದ್ಧಿ ಇಲಾಖೆ, ರಾಜ್ ನರ್ಸಿಂಗ್ ಹೋಂ ದಾದಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement