ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಹಿಂದ ಪ್ರವಾಸ: ಪ್ರತಿಕ್ರಿಯೆ

Rashmi Kasaragodu
Updated On : 16 Nov 2013, 11:34 am

ಒಂದು ಶಾಲೆ ಎಂದರೆ ಅಲ್ಲಿ ಒಂದೇ ಜಾತಿಗೆ ಸೇರಿರುವ ವಿದ್ಯಾರ್ಥಿಗಳು ಇರುವುದಿಲ್ಲ. ಸರ್ಕಾರ ಕೆಲವು ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸದ ಅವಕಾಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ಇದರಿಂದ, ವಿದ್ಯಾರ್ಥಿಗಳನ್ನು ಜಾತಿಯ ಆಧಾರದ ಮೇಲೆ ಬೇರೆ ಬೇರೆ ಮಾಡಿದಂತೆ ಆಗುವುದಿಲ್ಲವೇ.
 ಕೆ. ಮಂಜುನಾಥ್
  ವಿದ್ಯಾರ್ಥಿ
ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲಾ ಜಾತಿಯವರಿಗೂ ಒಂದೇ ಕಾನೂನು ಇದೆ. ಇದು, ಶಿಕ್ಷಣಕ್ಕೂ ಹೊರತಾಗಿಲ್ಲ. ಇಂತಹ ನಮ್ಮ ನೆಲದಲ್ಲಿ ರಾಜ್ಯ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಶೈಕ್ಷಣಿಕ ಪ್ರವಾಸದ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ.
 ಶರತ್
ವಿದ್ಯಾರ್ಥಿ
ಶಾಲೆಗೆ ಬರುವ  ಮಕ್ಕಳಲ್ಲಿ ಜಾತಿಯ ಮನೋಭಾವನೆ ಇರುವುದಿಲ್ಲ. ಅವರ ಗುರಿ ಶಿಕ್ಷಣ ಪಡೆಯುವಂತ್ತಾಗುತ್ತದೆ. ಅಂತಹ ಮಕ್ಕಳಲ್ಲಿ ಕೆಲವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಇನ್ನು ಕೆಲವರನ್ನು ಕೈಬಿಟ್ಟರೆ, ಮಕ್ಕಳಲ್ಲಿ ಜಾತಿಯ ತಾರತಮ್ಯ ಬರುತ್ತದೆ. ಮೇಲೂ, ಕೀಳು ಭಾವನೆ ಬಂದು, ಇದರಿಂದ ಕೂಡಿ ಕಲಿಯಬೇಕಾದ ವಿದ್ಯಾರ್ಥಿಗಳು ಬೇರೆ  ಬೇರೆಯಾಗಬಹುದು.
 ಸಂತೋಷ್
ವಿದ್ಯಾರ್ಥಿ
ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರು ಜಾತಿಯ ಸಂಕೋಲೆಯಲ್ಲಿಯೇ ಬದುಕುತ್ತಾರೆ. ಇದರಿಂದ ಹೊರ ಬಂದು ಜೀವನ ನಡೆಸುತ್ತೇನೆ ಎಂದು ಹೇಳುವವರು ಯಾರೂ ಇಲ್ಲ. ಜಾತಿಯ ಹೆಸರಿನಲ್ಲಿ ಮೀಸಲಾತಿ, ಅದರಡಿಯಲ್ಲಿಯೇ ಉದ್ಯೋಗ ಸೇರಿದಂತೆ ಸರ್ಕಾರದ ಇತರೆ ಸೌಲಭ್ಯಗಳನ್ನು ಪಡೆಯುತ್ತಾರೆ. ಜಾತಿಯನ್ನು ಬಿಟ್ಟು ತಾನು ಈ ಸಮಾಜದಲ್ಲಿ ಗುರುತಿಸಿಕೊಳ್ಳುತ್ತೇನೆಂದು ಹೇಳುವವರು ನಮ್ಮ ನಡುವೆ ಇಲ್ಲ. ಆದರೆ, ಸರ್ಕಾರ ಕೇವಲ ಜಾತಿಯವರನ್ನು ಮಾತ್ರ ಗುರುತಿಸಿ, ಬೇರೆ ಜಾತಿಯವರನ್ನು ಕಡೆಗಣಿಸುವುದು. ಸರಿಯಲ್ಲ, ಶಾಲೆಯಲ್ಲಿರುವ ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ಹೇಳುವ ಜನಪ್ರತಿನಿಧಿಗಳು, ಸರ್ಕಾರ, ಕೆಲವೇ ಜಾತಿ ಮಕ್ಕಳಿಗೆ ಪ್ರವಾಸದ ಅವಕಾಶ ನೀಡಿರುವುದು ಸರಿಯಲ್ಲ.
 ಲೋಕೇಶ್
ಶಿಕ್ಷಕರು
ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಕ್ಕೆ ಕರೆದುಕೊಂಡು ಹೋಗಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ನೋಡಿ ಆಶ್ಚರ್ಯವಾಯಿತು. ಶಾಲಾ ಮಕ್ಕಳಿಗೆ ಪ್ರವಾಸಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಇದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಸರ್ಕಾರ ಆದೇಶ ಹೊರಡಿಸಬೇಕು.
  ನಾಗರಾಜ್
ಸರ್ಕಾರಿ ಶಾಲೆಯ ಶಿಕ್ಷಕರು



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement