ಕಾರು ಅಪಘಾತ: ಮಹಿಳೆ ಸಾವು
ತರೀಕೆರೆ: ಪಟ್ಟಣದ ವಿ.ಐ.ಎಲ್.ಕಾರ್ಖಾನೆ ಸಮೀಪ ರಾ.ಹೆ.ಯಲ್ಲಿ ಕಾರು-ಲಾರಿ ಮತ್ತು ಬಸ್ಸಿನ ನಡುವೆ ಆಪಘಾತ ಸಂಭವಿಸಿ ಕಾರಿನಲ್ಲಿದ್ದ ಒಬ್ಬರು ಮೃತಪಟ್ಟಿದ್ದು ಇತರ ನಾಲ್ವರಿಗೆ ಗಾಯಗಳಾದ ಘಟನೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಂಭವಿಸಿದೆ.
ಮೃತರನ್ನು ತರೀಕೆರೆ ಸಮೀಪದ ದುಗ್ಲಾಪುರ ಸಿದ್ದರಹಳ್ಳಿಯ ಸಾಕಮ್ಮ(50) ಎಂದು ಗುರುತಿಸಲಾಗಿದೆ. ಕಾರು ದುಗ್ಲಾಪುರ-ಸಿದ್ದರಹಳ್ಳಿಯಿಂದ ಅಜ್ಜಂಪುರಕ್ಕೆ ಹೋಗುತ್ತಿತ್ತು. ಕಾರಿನಲ್ಲಿದ್ದ ಇಬ್ಬರಿಗೆ ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ತರೀಕೆರೆ ಮತ್ತು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ.
ಮಾಜಿ ಶಾಸಕ ಡಿ.ಎಸ್. ಸುರೇಶ್, ಎಪಿಎಂಸಿ ಅಧ್ಯಕ್ಷ ಶಿವಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಟಿ.ಜಿ. ಮಂಜುನಾಥ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ, ನೊಂದವರನ್ನು ಸಂತೈಸಿದರು.