ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭಾರತೀತೀರ್ಥ ಸಭಾಭವನ ಉದ್ಘಾಟನೆ

Rashmi Kasaragodu
Updated On : 16 Nov 2013, 11:34 am

ಶೃಂಗೇರಿ: ತಾಲೂಕಿನ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ  ಭಾರತೀ ತೀರ್ಥ ಸಭಾಭವನವನ್ನು ಶಾರದಾ ಪೀಠದ ಜಗದ್ಗುರು ಭಾರತೀ ತೀರ್ಥರು ಉದ್ಘಾಟಿಸಿದರು.
ನಂತರ ಆರ್ಶಿವಚನ ನೀಡಿದ ಅವರು, ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಕಾಲ ಕೂಡಿಬಂದಾಗ ಅದು ನಿರ್ವಿಘ್ನವಾಗಿ ನೆರವೇರುತ್ತದೆ. ಈ ಅಗ್ರಹಾರಕ್ಕೆ ಬಹಳ ವರ್ಷಗಳ ಹಿಂದೆಯೇ ಬಹಳಷ್ಟು ಮಹತ್ವವಿತ್ತು. ಈಗ ಮತ್ತೆ ಅದೇ ವೈಭವ ಪಡೆದುಕೊಂಡಿದೆ ಎಂದರು.
ಸುಮಾರು 24 ವರ್ಷಗಳ ಹಿಂದೆ ಈ ಸಭಾ ಭವನಕ್ಕೆ ಶಿಲನ್ಯಾಸ ನೇರವೇರಿತ್ತು. ನನ್ನ ಪಟ್ಟಾಭಿಷೇಕದ ಬಳಿಕ ಶಿಲನ್ಯಾಸ ನೆರವೇರಿಸಿದ್ದೆ. ಇದೀಗ ರಜತ ಮಹೋತ್ಸವ ಮೊದಲೇ  ಆರಂಭವಾಗಿರುವುದು ಸಂತೋಷ ತಂದಿದೆ. ಜನರು ಈ ಭವನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದಕ್ಕೆ ಮೊದಲು ಶ್ರೀಗಳು ನರಸಿಂಹಪುರದ ನರಸಿಂಹ ದೇವಾಲಯದಲ್ಲಿ ಧಾತ್ರಿ ಹೋಮದ ಪೂರ್ಣಾಹುತಿ ನೆರವೇರಿಸಿದರು. ನಂತರ ಗ್ರಾಮಸ್ಥರಿಂದ ಫಲಪುಷ್ಪ ಸಮರ್ಪಣೆ, ಪಾದಪೂಜೆ, ಭಿಕ್ಷಾವಂದನೆ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement