ಸಚಿನ್ಗೆ ನುಡಿನಮನ
ನರಸಿಂಹರಾಜಪುರ: ಕ್ರಿಕೆಟ್ ದಿಗ್ಗಜ ಸಚಿನ್ 24 ವರ್ಷಗಳ ಕ್ರಿಕೆಟ್ ಆಟ ಆಡಿ 200 ಪಂದ್ಯಗಳನ್ನು ಮುಗಿಸಿದ್ದು, ದಂತ ಕಥೆಯಾಗಿದ್ದಾನೆ ಎಂದು ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಪಿ.ಆರ್. ಸುಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ವತಿಯಿಂದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸಚಿನ್ಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ಕ್ರಿಕೆಟ್ ಆಟಕ್ಕೆ ತನ್ನದೇ ಆದ ನಿಯಮಗಳಿದ್ದು, ಯುವ ಕ್ರಿಕೆಟ್ ಆಟಗಾರರು ಕ್ರೀಡಾ ಸ್ಫೂರ್ತಿಯಿಂದ ಆಟವಾಡಿ ದೇಶಕ್ಕೆ ಕೀರ್ತಿ ತರಬೇಕು ಎಂದರು. ಲೆದರ್ ಬಾಲ್ ಕ್ರಿಕೆಟ್ ತರಬೇತುದಾರ ವಸಂತಕುಮಾರ್, ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ಅಭಿನವ ಗಿರಿರಾಜ್ ಮಾತನಾಡಿದರು. ಯುವ ಕ್ರಿಕೆಟ್ ಆಟಗಾರರು ಉಪಸ್ಥಿತರಿದ್ದರು. ನಂತರ ಸಚಿನ್ ಅವರ ಕ್ರಿಕೆಟ್ ಸಾಧನೆಗೆ ಸಿಹಿ ಹಂಚಲಾಯಿತು.