ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ

Rashmi Kasaragodu
Updated On : 16 Nov 2013, 11:32 am


ಚಿಕ್ಕಮಗಳೂರು: ತಮ್ಮ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಇನ್ನೆರಡು ದಿನಗಳೊಳಗೆ ಬಂಧಿಸದೆ ಹೋದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ದಲಿತ ಪರ ಸಂಘಟನೆಗಳೊಂದಿಗೆ ಧರಣಿ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಕೆ. ಭರತ್ ಹೇಳಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳೊಂದಿಗೆ ಶಾಮೀಲಾಗಿ ತಮ್ಮನ್ನು ಬಂಧಿಸಿರುವ ಚಿಕ್ಕಮಗಳೂರು ಗ್ರಾಮಾಂತರ ವೃತ್ತ ನಿರೀಕ್ಷಕ ಕೃಷ್ಣರಾಜು ಹಾಗೂ ಮಲ್ಲಂದೂರು ಠಾಣೆಯ ಸಬ್ ಇನ್ಸ್ಸ್ಪೆಕ್ಟರ್ ಚಂದ್ರಕಲಾ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆಸ್ಪತ್ರೆಗೆ ದಾಖಲು: ನ. 2 ರಂದು ತಮ್ಮದೆಯಾದ ಕಾಫಿ ತೋಟದಿಂದ ಮರಗಳನ್ನು ಕಡಿತಲೆ ಮಾಡಿ ಬರುವ ವೇಳೆಗೆ ಉಜ್ಜನಿಯ ಅರಣ್ಯ ಇಲಾಖೆ ತಪಾಸಣಾ ಕೇಂದ್ರದ ಬಳಿ ಪ್ರವೀಣ್ ಖಾಂಡ್ಯ, ಸತೀಶ್ ಖಾಂಡ್ಯ ಸೇರಿದಂತೆ ಕೆಲವು ಯುವಕರು ತಡೆದು ನಿಲ್ಲಿಸಿ ತಮ್ಮ ಮೇಲೆ ಹಲ್ಲೆ ನಡೆಸಿ, ಜಾತಿ ನಿಂಧನೆ ಮಾಡಿರುವುದಲ್ಲದೆ, ತಮ್ಮ ಬಳಿ ಇದ್ದ 1.85 ಲಕ್ಷ ರುಪಾಯಿಯನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ತಾವು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿದ್ದೆ ಎಂದು  ಹೇಳಿದರು.
ಬಳಿಕ ತಾವು ಬೆಂಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಸತೀಶ್ ಖಾಂಡ್ಯ ಅವರು ನೀಡಿರುವ ಅಕ್ರಮವಾಗಿ ತೋಟದಲ್ಲಿ ಮರಗಳನ್ನು ಕಡಿತಲೆ ಮಾಡಲಾಗಿದೆ ಎಂಬ ದೂರಿನನ್ವಯ ಮಲ್ಲಂದೂರು ಠಾಣೆಯ ಸಬ್ ಇನ್ಸ್ಸ್ಪೆಕ್ಟರ್ ಚಂದ್ರಕಲಾ ಅವರು ದೂರನ್ನು ದಾಖಲಿಸಿ, ತಮ್ಮನ್ನು ನಾಲ್ಕು ದಿನಗಳ ಕಾಲ ಜೈಲಿಗೆ ಕಳುಹಿಸಿದ್ದರು. ಇದರ ಹಿಂದೆ ಬಿಜೆಪಿ ಜನಪ್ರತಿನಿಧಿಗಳ ಕೈವಾಡವಿದೆ ಎಂದು ದೂರಿದರು.
ಆರೋಪಿಗಳ ಬಂಧಿಸಿ: ಈ ಸಂಬಂಧ ಪಶ್ಚಿಮ ವಲಯದ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗಿದ್ದು, ಸಿಪಿಐ ಹಾಗೂ ಸಬ್ ಇನ್ಸ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ್ದೇನೆ. ತಮ್ಮ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸದೇ ಹೋದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಧರ್ಮೇಶ್, ಮರ್ಲೆ ಅಣ್ಣಯ್ಯ, ಚಂದ್ರಪ್ಪ, ನಂಜುಂಡಪ್ಪ, ನಾಗಣ್ಣ ಹಾಗೂ ಖಾಲಿದ್ ಅಹಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement