ದತ್ತಿ ಉಪನ್ಯಾಸ ಕಾರ್ಯಕ್ರಮ
ಮೂಡಿಗೆರೆ: ಆರೋಗ್ಯವನ್ನು ಕಾಪಾಡಿಕೋಳ್ಳಲು ಪ್ರತಿಯೊಬ್ಬರೂ ವೈದ್ಯಕೀಯ ಜ್ಞಾನ ತಿಳಿದುಕೊಳ್ಳಬೇಕು ಸಾಹಿತಿ ಕಿರಣಕೆರೆ ಉಮೇಶ್ಚಂದ್ರನ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಳಸ ಹೊಬಳಿ ಘಟಕವು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಕುಮಾರ ಶಮಂತ ಸದಾಶಿವಗೌಡ ದತ್ತಿನಿಧಿ ಉಪಸ್ಯಾಸ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ಕನ್ನಡ ಸಾಹಿತ್ಯದ ಕುರಿತು ಸಂಸ್ಥೆ ಅವರು ಮಾತನಾಡಿದ ಅವರು, ಸಣ್ಣಪುಟ್ಟ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು, ದೊಡ್ಡ ದೊಡ್ಡ ಕಾಯಿಲೆಯನ್ನು ಎದುರಿಸಲು ಪ್ರತಿಯೊಬ್ಬರಿಗೂ ಸಾಮಾನ್ಯ ಆರೋಗ್ಯ ಜ್ಞಾನವನ್ನು ತಿಳಿದಿರಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಳಸ ಹೊಬಳಿ. ಕ.ಸಾ.ಪಾ. ಅಧ್ಯಕ್ಷ ಅಬ್ದುಲ್ ಕರೀಂ ವಹಿಸಿದ್ದರು. ದತ್ತಿನಿಧಿ ಉಪನ್ಯಾಸದಲ್ಲಿ ತಾಲ್ಲೂಕು ಕಾ.ಸಾ.ಪಾ.ದ ನಿಕಟಪೂರ್ವ ಅಧ್ಯಕ್ಷರಾದ ಆ.ರಾ.ರಾಧಾಕೃಷ್ಣ ಹೋಬಳಿ ಘಟಕದ ಕಾರ್ಯದರ್ಶಿ ಆ.ರಾ.ಸತೀಶ್ಚಂದ್ರ, ಕೋಶಾಧ್ಯಕ್ಷರಾದ ಕೆ.ತಿಮ್ಮಪ್ಪ, ಅಗಸ್ಟಿನ್, ರವೀಂದ್ರ ಭಟ್, ಶಾಲಾ ಮುಖ್ಯಸ್ತರಾದ ಪ್ರಕಾಶ್ ಡೊಂಗ್ರೆ, ಲೋಕೇಶ, ಶ್ರೀ ಅರವಿಂದ ಹಾಗೂ ಮೊದಲಾದವರು ಉಪಸ್ಥಿತರಿದ್ದರು.