ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡ'

Mainashree
Updated On : 17 Nov 2013, 10:53 am

ಕ.ಪ್ರ. ವಾರ್ತೆ, ತರೀಕೆರೆ, ನ.16
ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಶಿವಮೊಗ್ಗ ಮಾನಸ ಎಜುಕೇಶನ್ ಫೌಂಡೇಶನ್ ಸಂಸ್ಥೆ ವೈದ್ಯೆ ಡಾ. ಪ್ರೀತಿ ಶಾನುಬೋಗ್  ತಿಳಿಸಿದ್ದಾರೆ.
ಶನಿವಾರ ರೋಟರಿ ಸಂಸ್ಥೆ ವತಿಯಿಂದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜೀವನ ಕೌಶಲ್ಯ ಮತ್ತು ಓದಿನ ಕೌಶಲ್ಯಗಳ ತರಬೇತಿ ಅಭಿಯಾನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬುದ್ಧಿವಂತಿಕೆ ಬಳಕೆಯಾಗಲಿ: ಮಾನಸಿಕವಾಗಿ ಚಿಕ್ಕ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಭಾವನೆಗಳು ಏರುಪೇರಾಗುವಂತಹ ವಯಸ್ಸು ಇದು, ಪರೀಕ್ಷೆ ಎದುರಿಸುವ ಬುದ್ಧಿವಂತಿಕೆಯು ಸರಿಯಾದ ಮಾರ್ಗದಲ್ಲಿ ಬಳಕೆಯಾಗಬೇಕು, ಮನಸ್ಸು ಮತ್ತು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕುವಿವಿ ಡಾ. ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉದ್ವಿಗ್ನತೆ ಮತ್ತು ಖಿನ್ನತೆ ಹೆಚ್ಚಾಗಿ ಕಂಡುಬರುತ್ತಿದೆ. ಪ್ರತಿಭಾನ್ವಿತರಲ್ಲೂ ಖಿನ್ನತೆ ಇದೆ. ಇದರಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ. ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಾಗಿದೆ. ಯುವಕರು ಮಾನವ ಸಂಪನ್ಮೂಲಗಳು, ಹಿಂದಿನ ಅವಿಭಕ್ತ ಕುಟುಂಬವೇ ಚೆನ್ನಾಗಿತ್ತು, ವ್ಯಕ್ತಿತ್ವವನ್ನು ಚೆನ್ನಾಗಿ ಬೆಳಸಿಕೊಳ್ಳಬೇಕು, ಮಕ್ಕಳಲ್ಲಿ ಅನಾಥ ಪ್ರಜ್ಞೆ ಹೋಗಬೇಕು ಎಂದು ಸಲಹೆ ನೀಡಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ಮಕ್ಕಳು ಮೊಬೈಲು, ಕಂಪ್ಯೂಟರ್ ಫೇಸ್‌ಬುಕ್ ಇತ್ಯಾದಿಗಳ ಹವ್ಯಾಸದಿಂದ ಓದಿಗೆ ಅಡ್ಡಿಯಾಗುತ್ತಿದೆ. ಮಕ್ಕಳಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆ ಇದೆ, ಅಂಕದ ಮೇಲೆ ಅವಲಂಬಿತವಾಗಬಾರದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಗೋಪಿನಾಥ್, ಅನಿಲ್ ಪ್ರಿಯಾಂಕ ಅಪರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಜಿ. ತಿಪ್ಪೇಶ್, ಡಾ.ಜಿ.ಸಿ. ಶರತ್, ಟಿ.ಆರ್.ಶ್ರೀಧರ್, ರೋಟರಿ ಸಂಸ್ಥೆ ಸದಸ್ಯರು, ಪ್ರಾಚಾರ್ಯ ಟಿ.ಬಿ. ಅಣ್ಣಪ್ಪ, ರುದ್ರೇಶ್, ಶಿಕ್ಷಕರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement