'ಮಾನಸಿಕ, ದೈಹಿಕ ದೃಢತೆಗೆ ಕ್ರೀಡೆ ಸಹಕಾರಿ'
ಕ.ಪ್ರ.ವಾರ್ತೆ, ಕಡೂರು, ನ.16 ಓದು ಬರಹದ ಜೊತೆಗೆ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಸದೃಢರಾಗಲು ಕ್ರೀಡೆಯೂ ಓದು ಬರಹದಷ್ಟೇ ಮುಖ್ಯ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ಅವರು ಕಡೂರು ತಾಲೂಕು ತಂಗಲಿ ತಾಪಂ ವ್ಯಾಪ್ತಿಯ ಕಾನಗೊಂಡನಹಳ್ಳಿಯ ಸರ್ಕಾರಿ ಶಾಲೆ ಅವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರು. 10 ಲಕ್ಷ ವೆಚ್ಚದಲ್ಲಿ ಮಕ್ಕಳಿಗಾಗಿ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆ ಇಲ್ಲ: ಈ ಶಾಲೆಯ ಕ್ರೀಡಾ ಮೈದಾನ 3 ಎಕರೆಯಿದ್ದರೂ ಸ್ವಚ್ಛವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರು ಮೈದಾನವನ್ನು ಸ್ವಚ್ಛಗೊಳಿಸಿ ಸುಸಜ್ಜಿತ ಮೈದಾನ ನಿರ್ಮಿಸಬೇಕು. ಪೋಷಕರು ಜನಪ್ರತನಿಧಿಗಳು ನಮ್ಮ ಶಾಲೆ ನಮ್ಮ ಊರು ಈ ಶಾಲೆಗೆ ಏನಾದರೂ ಸಹಾಯ ಮಾಡಬೇಕು ಎಂಬ ಮನೋಭಾವದಿಂದಾಗಿ ಅಭಿವೃದ್ದಿಗೆ ಸಹಕರಿಸಬೇಕು ಎಂದರು.
ಯಳ್ಳಂಬಳಸೆ ಜಿಪಂ ಸದಸ್ಯರಾದ ಶಶಿರೇಖಾ ಎಂ.ಆರ್.ಟಿ. ಸುರೇಶ್, ತಾಪಂ ಸದಸ್ಯ ಆರ್. ಶಿವಕುಮಾರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶೈಲಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೂಕಪ್ಪಗೌಡ, ಉಪಾಧ್ಯಕ್ಷೆ ಜಯಮ್ಮ, ಗ್ರಾಪಂ ಅಭಿವೃದ್ಧಿ ಅಧಿಕಾರಿ ದಾಸಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜ ಬೋವಿ, ತಂಗಲಿ ಗ್ರಾಪಂ ಸದಸ್ಯರಾದ ನೇತ್ರಾವತಿ, ವಿಶಾಲಾಕ್ಷಿ, ಕೆ.ಎನ್. ಕೃಷ್ಣಮೂರ್ತಿ, ಬಿ.ಟಿ. ಗಂಗಾಧರನಾಯ್ಕ, ಗಣೇಶ್, ಶಾರದಾ ಬಾಯಿ, ಎಚ್.ಟಿ.ನಾಗರಾಜು, ವಸಂತಬಾಯಿ, ಮುಖ್ಯ ಶಿಕ್ಷಕ ಗುರುವಪ್ಪ, ಶಿಕ್ಷಕಿ ಶೈಲಾ, ಸರೋಜ ಗ್ರಾಮಸ್ಥರು ಉಪಸ್ಥಿತರಿದ್ದರು.