ಸುದ್ದಿ ಸಂಕ್ಷೇಪ
ಇಂದು ಉಚಿತ ನೇತ್ರ ತಪಾಸಣಾ ಶಿಬಿರ
ಶೃಂಗೇರಿ: ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್ ಹಾಗೂ ಮಲೆನಾಡು ಕಣ್ಣಿನ ಮತ್ತು ಮಕ್ಕಳ ಆಸ್ಪತ್ರೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನ.17ರ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಫಂಡಸ್ ಕ್ಯಾಮೆರಾದಿಂದ ಕಣ್ಣಿನ ತೊಂದರೆ, ಕಾಂಟ್ರ್ಯಾಕ್ಟ್, ಮಧುಮೇಹ, ರಕ್ತ ಒತ್ತಡ ರೆಟಿನೋಸತಿ ಮುಂತಾದ ಸಮಸ್ಯೆಗಳಿಗೆ ಉಚಿತ ತಪಾಸಣೆ ನೀಡಲಾಗುವುದು. ನೇತ್ರ ತಜ್ಞರು ಶಿಬಿರದಲ್ಲಿ ಪಾಲ್ಗೊಳಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರ ನಡೆಯಲಿದೆ. ಸಾವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವಿವರಗಳಿಗೆ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಸಹಕಾರ ಸಾರಿಗೆ ಸಂಘಕ್ಕೆ ಪ್ರಶಸ್ತಿ
ಕೊಪ್ಪ: ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಇತ್ತೀಚೆಗೆನಡೆದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ 2013 ದಿನಾಚರಣೆಯ ಸಂದರ್ಭದಲ್ಲಿ ಕೊಪ್ಪ ಸಹಕಾರ ಸಾರಿಗೆ ಸಂಘಕ್ಕೆ ಜಿಲ್ಲೆಯ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ರಾಜ್ಯದ ಸಹಕಾರ ಸಚಿವರಾದ ಹೆಚ್.ಎಸ್. ಮಹದೇವ ಪ್ರಸಾದ್ ಸಂಘದ ಅಧ್ಯಕ್ಷರಾದ ಈ.ಎಸ್.ಧರ್ಮಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಗಾಡ್ವಿನ್ ಜಯಪ್ರಕಾಶ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಟಿ.ಸುಂದರೇಶ್, ನಿರ್ದೇಶಕರುಗಳಾದ ಜಿ.ಆರ್.ವಿಶ್ವನಾಥ್,ಬಿ.ಎನ್. ಮಹೇಶ್,ಎಸ್.ಸಿ.ತಮ್ಮಪ್ಪಗೌಡ, ವಿ.ರಮೇಶ್, ಎಸ್.ಬಿ. ಹಾಲಪ್ಪಗೌಡ,ಕಟ್ಟೇಗೌಡ,ಎನ್.ವೆಂಕಟರಾಂ,ರವಿ,ಶಂಕರ, ಎಸ್,ಗಾಯಿತ್ರಿ, ಶೋಭಾ ಹಾಜರಿದ್ದರು.
ರಾಜಕಾರಣಿಗಳಿಗೆ ಆತ್ಮವಲೋಕನ ಅಗತ್ಯ
ಶೃಂಗೇರಿ: ರಾಜಕಾರಣ ಉನ್ನತ ಆದರ್ಶಗಳುಳ್ಳದ್ದು. ಇಂದು ಆದರ್ಶ ಕಳೆದುಕೊಂಡು ಕೇವಲ ರಾಜಕೀಯವಾಗಿದೆ. ರಾಜಕಾರಣಕ್ಕೆ ಅಂಟಿದ ಕಳಂಕವನ್ನು ತೊಡೆದು ಹಾಕಲು ರಾಜಕಾರಣಿಗಳು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಕಡೂರು ಶಾಸಕ ವೈಎಸ್ವಿ ದತ್ತಾ ಹೇಳಿದರು. ಅವರು ಪಟ್ಟಣದ ಮಹಾತ್ಮಾ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹೃದಯ ಸಮ್ಮೇಳನದಲ್ಲಿ ಮಾತನಾಡಿದರು.
ಎಪ್ಪತ್ತರ ದಶಕದಲ್ಲಿ ಜೆಪಿ ಚಳವಳಿ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಆದರೆ ಇಂದು ಮುತ್ಸದಿ ರಾಜಕಾರಣ ಹೋಗಿ ಪುಢಆರಿ ರಾಜಕಾರಣ ನಡೆಯುತ್ತಿದೆ. ಆದರ್ಶ ಅನುಷ್ಠಾನಗೊಳಿಸಬೇಕಾದ ಸ್ವಯಂ ಸೇವಕರೇ ಪ್ರಾಮಾಣಿಕ ರಾಜಕಾರಣ ಮರೆಯುತ್ತಿದ್ದಾರೆ ಎಂದರು.
ಕನಿಷ್ಠ ಸ್ಪಂದನೆ: ಜನಪ್ರತಿನಿಧಿಗಳಾದವರು ಕನಿಷ್ಠ ಜನಸ್ಪಂದನೆ ಮಾಡುವ ಭಾವನೆ ಹೊಂದಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಗಳೇ ವ್ಯವಸ್ಥೆಯ ಕೇಂದ್ರ ಬಿಂದು. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಜನರನ್ನು ಅಸಡ್ಡೆ, ತಾತ್ಸರದಿಂದ ನೋಡಬಾರದು ಎಂದವರು ಹೇಳಿದರು.
ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಮಾತನಾಡಿ, ಸುಸಂಸ್ಕೃತ ವ್ಯಕ್ತಿಗಳು ಸಮಾಜದ ದೊಡ್ಡ ಆಸ್ತಿ. ಮಾನವೀಯತೆ, ನೈತಿಕತೆ ಅಧಃಪತನವಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಯೋಗ, ಧ್ಯಾನ ಶಿಬಿರಗಳ ಅನಿವಾರ್ಯತೆಯಿದೆ ಎಂದರು.
16 ಶ್ರೀ ಚಿತ್ರ 1
ಶೃಂಗೇರಿಯ ಮಹಾತ್ಮಾಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹೃದಯ ಸಮ್ಮೇಳನದಲ್ಲಿ ಶಾಸಕ ದತ್ತ ಮಾತನಾಡಿದರು.