ಕನಕ ಸದ್ಭಾವನಾ ಜ್ಯೋತಿಗೆ ಅದ್ಧೂರಿ ಸ್ವಾಗತ
ಕ.ಪ್ರ.ವಾರ್ತೆ ತರೀಕೆರೆ ನ.17
ಭಾನುವಾರ ಬೆಳಗ್ಗೆ ತರೀಕೆರೆಗೆ ಆಗಮಿಸಿದ ಕನಕ ಸದ್ಭಾವನಾ ಜ್ಯೋತಿಯನ್ನು ಪಟ್ಟಣದ ಮಿನಿ ವಿಧಾನಸೌಧದ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪುರಸಭೆ ಸದಸ್ಯ ಈರಣ್ಣ ಅವರು ಕನಕ ಸದ್ಭಾವನಾ ಜ್ಯೋತಿಗೆ ಪುಷ್ಪಮಾಲೆ ಅರ್ಪಿಸಿದರು. ಮೈಸೂರು ವಿಭಾಗ ಕೆ.ಆರ್. ನಗರ ಕಾಗಿನೆಲೆ ಮಹಾ ಸಂಸ್ಥಾನದ ಶಿವಾನಂದಪುರಿ ಮಹಾಸ್ವಾಮಿಗಳು, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಟಿ.ಎಚ್. ಹಾಲುವಜ್ರಪ್ಪ,
ಶಾಸಕ ಜಿ.ಎಚ್. ಶ್ರೀನಿವಾಸ್, ಕುರುಬ ಸಮಾಜದ ಅಧ್ಯಕ್ಷ ಟಿ.ಎನ್. ಗೋಪಿನಾಥ್, ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ಟಿ.ಆರ್. ಇಂದ್ರಯ್ಯ, ಎಚ್.ಚಂದ್ರಪ್ಪ, ರಾಮಚಂದ್ರಪ್ಪ, ಎಸ್. ತಿಪ್ಪೇರುದ್ರಯ್ಯ, ಗಿರೀಶ್ ಪುರಸಭಾ ಸದಸ್ಯರು, ಕನಕ ಸದ್ಭಾವನಾ ಜ್ಯೋತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಿನಿ ವಿಧಾನಸೌಧದಿಂದ ಸಾಲುಮರದಮ್ಮನವರ ದೇವಸ್ಥಾನದವರೆಗೆ ಕನಕ ಸದ್ಭಾವನಾ ಜ್ಯೋತಿ ಮೆರವಣಿಗೆ ಏರ್ಪಡಿಸಲಾಗಿತ್ತು.