ಪದಾಧಿಕಾರಿಗಳ ಪದಗ್ರಹಣ
ನರಸಿಂಹರಾಜಪುರ: ಪ್ರಕೃತಿ ವೈಶಿಷ್ಟ್ಯವನ್ನು ಸಾಮಾನ್ಯ ಜನರು ನೋಡುವುದಕ್ಕೂ ಛಾಯಾಗ್ರಾಹಕರು ನೋಡುವುದಕ್ಕೂ ವ್ಯತ್ಯಾಸವಿದ್ದು, ಛಾಯಾಗ್ರಾಹಕರು ತಮ್ಮ ಭಾವನೆಯೊಂದಿಗೆ ಪ್ರಕೃತಿಯ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ ಎಂದು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು. ಅಗ್ರಹಾರದ ಉಮಾ ಮಹೇಶ್ವರ ಸಮುದಾಯಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅತಿಥಿಯಾಗಿದ್ದ ಜಿಲ್ಲಾ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಎಂ.ಓ. ಜೋಯಿ ಮಾತನಾಡಿ, ಜಗತ್ತಿನಲ್ಲಿ ನಡೆಯುವ ವಿಸ್ಮಯವನ್ನು ಎಲ್ಲರೂ ಗಮನಿಸಲು ಸಾಧ್ಯವಾಗುವುದಿಲ್ಲ. ಆದರೆ, ಛಾಯಾಗ್ರಾಹಕರು ತಮ್ಮ ಕ್ಯಾಮರದಿಂದ ಅದನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ತಾಲೂಕು ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ದಯಾಕರ ಪದವಿ ಸ್ವೀಕಾರ ಮಾಡಿ ಮಾತನಾಡಿದರು. ತಾ. ಛಾಯಾಗ್ರಾಹಕರ ಸಂಘದ ಖಚಾಂಚಿ ಪ್ರವೀಣ್, ಸದಸ್ಯರಾದ ಮಥಾಯಿ ಇದ್ದರು.