ವಿಷ ಸೇವಿಸಿ ಆತ್ಮಹತ್ಯೆ
ಶೃಂಗೇರಿ: ತಾಲೂಕಿನ ಧರೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಎಂಬಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ನೆಲ್ಲೂರು ವಾಸಿ ವೆಂಕಟೇಶ್ (45) ಮೃತರು. ಮನೆಯಲ್ಲಿ ಇಟ್ಟಿದ ಮೆಟಾಸಿಡ್ ಸೇವಿಸಿದ್ದು, ಕೊನೆಯುಸಿರೆಳೆದರು. ಜಿಗುಪ್ಸೆಯೇ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.