'ಸಹಕಾರಿ ಸಂಘಗಳ ಅಭಿವೃದ್ಧಿಯಾಗಲಿ'
ಬಾಳೆಹೊನ್ನೂರು: ಸಹಕಾರಿ ಸಂಘಗಳು ಸಮರ್ಥವಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿ ಹೊಂದಬೇಕು ಎಂದು ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಸುಧಾಕರ್ ಹೇಳಿದ್ದಾರೆ.
ಇಲ್ಲಿನ ಸಹಕಾರ ಸಂಘದ ಆವರಣದಲ್ಲಿ 60ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರಿ ಆಡಳಿತ ನಾಯಕತ್ವ ಮತ್ತು ಸುಧಾರಣೆಗಳು ಉದ್ದೇಶದಡಿಯಲ್ಲಿ ಗುರುವಾರ ಪ್ರಾರಂಭವಾದ ಸಹಕಾರಿ ಸಪ್ತಾಹದ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
20ರ ವರೆಗೆ ನಡೆಯುವ ಸಹಕಾರಿ ಸಪ್ತಾಹವು ರಾಜ್ಯದ ಎಲ್ಲಾ ಸಹಕಾರಿ ಬಂಧುಗಳ ಅತ್ಮೀಯ ಸಮ್ಮಿಲನಕ್ಕೆ ಸಾಕ್ಷಿಯಾಗಲಿದ್ದು, ಸಹಕಾರಿ ಮೌಲ್ಯಗಳನ್ನು ಎತ್ತಿಹಿಡಿಯಲಿದೆ ಎಂದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಮಾತನಾಡಿದರು. ಕೆ.ಸಿ. ವೆಂಕಟೇಶ್, ಕೆ.ಕೆ. ವೆಂಕಟೇಶ್, ಪಾರ್ವತಮ್ಮ, ಕೆ.ಟಿ. ನಾರಾಯಣ, ಉಮೇಶ್ ಇದ್ದರು.