ಮಳೆ ಭೀತಿಯಿಂದ ಕಂಗಾಲಾದ ರೈತ
ನರಸಿಂಹರಾಜಪುರ: ತಾಲೂಕಿನ ಕಸಬಾ ಹೋಬಳಿಯಲ್ಲಿ ಬಹುತೇಕ ಬತ್ತದ ಗದ್ದೆಗಳು ಕಟಾವಿಗೆ ಬಂದಿದ್ದು ಕಳೆದ ಎರಡು ದಿನದಿಂದ ಮೋಡದ ವಾತಾವರಣ ಕಂಡು ಬರುತ್ತಿರುವುದರಿಂದ ರೈತರು ಮಳೆ ಬರುವ ಭೀತಿಯಿಂದ ಕಂಗಾಲಾಗಿದ್ದಾರೆ.
ಕಸಬಾ ಹೋಬಳಿಯ ಮುತ್ತಿನಕೊಪ್ಪ, ಶೆಟ್ಟಿಕೊಪ್ಪ, ನಾಗಾಲಾಪುರ, ಬಡಗಬೈಲು, ಮೆಣಸೂರು ಮುಂತಾದ ಗ್ರಾಮಗಳಲ್ಲಿ ಈಗಾಗಲೇ ನೂರಾರು ಎಕರೆ ಗದ್ದೆ ಕಟಾವು ಮಾಡಲಾಗಿದ್ದು, ಮೋಡ ಶುರುವಾಗಿರುವುದರಿಂದ ರೈತರಿಗೆ ಆತಂಕ ಶುರುವಾಗಿದೆ. ಹೈಬ್ರೀಡ್ ಬತ್ತದ ತಳಿಗಳಾದ ಜಯ 1001, ಜ್ಯೋತಿ, ಜೆ.ಜಿ.ಎಲ್ 1799 ಮುಂತಾದ ಬತ್ತದ ತಳಿಗಳನ್ನು ರೈತರು ಬೆಳೆದಿದ್ದಾರೆ.
ಕೆಲವು ರೈತರು ಕಟಾವು ಮಾಡುವುದನ್ನು ನಿಲ್ಲಿಸಿದ್ದಾರೆ. ಇನ್ನು ಕೆಲವು ರೈತರು ಕೊಯ್ದು ಬತ್ತದ ಹೊರೆಯನ್ನು ಲಗುಬಗೆಯಿಂದ ಕಣಕ್ಕೆ ಸಾಗಿಸುತ್ತಿದ್ದಾರೆ.