'ವಿದ್ವಜ್ಜನರನ್ನು ಸಂಪತ್ತಿನಿಂದ ಹಿಡಿದಿಡಲು ಅಸಾಧ್ಯ'
ತರೀಕೆರೆ: ವಿದ್ವಜ್ಜನರನ್ನು ಸಂಪತ್ತಿನಿಂದ ಹಿಡಿದಿಡಲು ಸಾಧ್ಯವಿಲ್ಲ ಎಂದು ಇತಿಹಾಸ ಪ್ರಸಿದ್ಧ ಸೋಮಪುರ ಕ್ಷೇತ್ರದ ದತ್ತಾಶ್ರಮದ ಅಧ್ಯಕ್ಷರು, ವೇ.ಬ್ರ. ಸೋ.ತಿ. ನಾಗರಾಜ್ ತಿಳಿಸಿದ್ದಾರೆ.
ಸಮೀಪದ ಸೋಮಪುರ ದತ್ತಾಶ್ರಮ ವತಿಯಿಂದ ಆಶ್ರಮದ ಆವರಣದಲ್ಲಿ ದತ್ತಾಶ್ರಮದ ಸಪ್ತಮ ವಾರ್ಷಿಕೋತ್ಸವ ಮತ್ತು ವೇದ- ಶಾಸ್ತ್ರ ವಿದ್ವಾಂಸರ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ದತ್ತಾಶ್ರಮದಲ್ಲಿ ಎಲ್ಲರ ಸಹಕಾರದಿಂದ ರಾಮಾಯಣದಲ್ಲಿ ಶ್ರೀರಾಮ- ಲಕ್ಷ್ಮಣರ, ವಾಲಿ ಸುಗ್ರೀವಾದಿ ಹನುಮಂತರ ಇತ್ಯಾದಿ ಎಲ್ಲರ ಸಂವಾದ ಸಂಗ್ರಹ ಕಾರ್ಯ ಮಾಡುವ ಉದ್ದೇಶ ಹೊಂದಲಾಗಿದೆ. ವಾಲ್ಮೀಕಿ ರಾಮಾಯಣದ ಪ್ರಸಾರ ಕಾರ್ಯ ತೀವ್ರವಾಗಿ ಮಾಡಬೇಕು ಎಂದು ತಿಳಿಸಿದರು.
ಪಳ್ಳತ್ತಡ್ಕ ಪ್ರಸಿದ್ಧ ಕೃಷ್ಣ ಯಜುರ್ವೇದ ವಿದ್ವಾಂಸ ಪರಮೇಶ್ವರ ಭಟ್ಟ ಮಾತನಾಡಿ, ಶರೀರ ನಾಶವಾಗುತ್ತದಯೇ ಹೊರತು ಆತ್ಮ ನಾಶವಾಗುವುದಿಲ್ಲ. ಆತ್ಮ ಪರಮಾತ್ಮನದು. ಅದಕ್ಕೆ ಕರ್ಮದ ಲೇಪ ಇದೆ ಅಷ್ಟೆ. ವಿದ್ಯೆಗೆ ಜ್ಞಾನಕ್ಕೆ ನೂರು ಜನ್ಮ ಹೋದರೂ ನಾಶ ಇಲ್ಲ ಎಂದು ತಿಳಿಸಿದರು.
ಗೋಕರ್ಣ ಮೇಧಾದಕ್ಷಿಣಾಮೂರ್ತಿ ಸಂಸ್ಕೃತ ಕಾಲೇಜು ನಿವೃತ್ತ ಪ್ರಾಂಶುಪಾಲಕರು ಗಣಪಯ್ಯ ಹೊಳ್ಳರು ಮಾತನಾಡಿದರು. ಪ್ರಸಿದ್ಧ ಕೃಷ್ಣ ಯಜುರ್ವೇದ ವಿದ್ವಾಂಸ ಪರಮೇಶ್ವರ ಭಟ್ಟರು ಮತ್ತು ವಿದ್ವಾನ್ ಗಣಪಯ್ಯ ಹೊಳ್ಳರು ಅವರನ್ನು ದತ್ತಾಶ್ರಮದ ಅಧ್ಯಕ್ಷರು ವೇ.ಬ್ರ. ಸೋ.ತಿ. ನಾಗರಾಜ್ ಅವರು ಸನ್ಮಾನಿಸಿದರು.
ಟಿ. ಆರ್. ಅನಂತ ಪಂಡಿತ್ ಮತ್ತು ಲೀಲಾ ಪಂಡಿತ್ ಸೋ.ತಿ. ನಾಗರಾಜ್ ಅವರನ್ನು ಸನ್ಮಾನಿಸಿದರು. ವೆಂಕಟರಮಣ ದೇ. ಭಟ್ರು, ವೇ. ಚಂದ್ರಶೇಖರ ಭಟ್ರು, ವೇ. ಪರಮೇಶ್ವರ ಭಟ್ರು, ವೇ. ಶೇಷಗಿರಿ ಭಟ್ರು ಮಾತನಾಡಿದರು.
ದತ್ತಾಶ್ರಮದ ಸದಸ್ಯರು, ಚಲಪತಿ ಮತ್ತಿತರರು ಉಪಸ್ಥಿತರಿದ್ದರು. ಲೀಲಾವತಿ ಪ್ರಾರ್ಥಿಸಿದರು.