ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಾಸಕ ನಾಪತ್ತೆ: ಪೊಲೀಸರಿಗೆ ದೂರು

Rashmi Kasaragodu
Updated On : 19 Nov 2013, 11:34 am

ಕೊಪ್ಪ: ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್ ಕಳೆದ ಹತ್ತು ದಿನಗಳಿಂದ ಕ್ಷೇತ್ರದ ಜನರಿಗೆ ಸಿಗದೆ ಕಾಣಿಯಾಗಿದ್ದು ಅವರನ್ನು ಪತ್ತೆಮಾಡಿ ಕೊಡುವಂತೆ ಶೃಂಗೇರಿ ಕ್ಷೇತ್ರ ಸ್ವಾಭಿಮಾನಿ ವೇದಿಕೆ ಸೋಮವಾರ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇತ್ತೀಚೆಗೆ ಶೃಂಗೇರಿ ಮತ್ತು ಮೇಗೂರುಗಳಲ್ಲಿ ಗಿರಿಜನರು ಮತ್ತು ರೈತರ ಸಮಸ್ಯೆ ಆಲಿಸುವ ಜಿಲ್ಲಾ ಮಟ್ಟದ ಜನ ಸಂಪರ್ಕ ಸಭೆ ನಡೆದಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಪಾಲ್ಗೊಂಡಿದ್ದರೂ ಸಹ ಕ್ಷೇತ್ರದ ಶಾಸಕರು ಪಾಲ್ಗೊಳ್ಳದಿರುವುದು ಜನರಲ್ಲಿ ಹಲವು ಅನುಮಾನ  ಉಂಟುಮಾಡಿದೆ. ಆದ್ದರಿಂದ ತಕ್ಷಣ ಶಾಸಕರನ್ನು ಪತ್ತೆ ಮಾಡಿಕೊಡುವಂತೆ ದೂರಿನಲ್ಲಿ ಒತ್ತಾಯಿಸಿಲಾಗಿದೆ. ವೇದಿಕೆ ಪರವಾಗಿ ಶೋಭಿಂತ್, ರವಿಶಂಕರ್, ಸುಧೀರ್ ಕುಮಾರ್, ನವೀನ್, ಸಿಪಿಐ ಮುಖಂಡ ಗಣೇಶ್ ಶೆಟ್ಟಿ, ಲಕ್ಷ್ಮಣ ದೂರು ದಾಖಲಿಸಿದರು.
ಆರೋಗ್ಯಶಿಬಿರ
ನರಸಿಂಹರಾಜಪುರ: ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಹಾಗೂ ಪುಷ್ಪ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ಪುಷ್ಪ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ನಡೆಯಿತು. ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆಯ ವೈದ್ಯರ ತಂಡವು ಆರೋಗ್ಯ ತಪಾಸಣೆ ನಡೆಸಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಸುಂದರೇಶ್, ಕಾರ್ಯದರ್ಶಿ ದಿವಾಕರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶೀಲಾ ಸುಂದರೇಶ್, ಉಮಾ, ಸದಸ್ಯೆ ಪುಷ್ಪಾ ಶಾಂತಕುಮಾರ್, ಉಪೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement