ಸಾಮಾಜಿಕ ಸೇವೆಗೆ ಯುವಪಡೆ ರಚನೆ
ಕಡೂರು: ತಾಲೂಕಿನಲ್ಲಿ ಹಿಂದುಳಿದ ವರ್ಗ ಸೇರಿದಂತೆ ಕುರುಬ ಸಮುದಾಯದ ಯುವಕರನ್ನು ಸಂಘಟಿಸುವ ಮೂಲಕ ಸಾಮಾಜಿಕವಾಗಿ ಸೇವೆ ಸಲ್ಲಿಸಲು ಯುವಪಡೆ ರಚಿಸಲಾಗುತ್ತಿದೆ ಎಂದು ತಾಲೂಕು ಯುವ ಕುರುಬರ ವೇದಿಕೆ ಅಧ್ಯಕ್ಷ ಶರತ್ ಕೃಷ್ಣಮೂರ್ತಿ ಹೇಳಿದರು.
ಅವರು ಕಡೂರು ಪಟ್ಟಣದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವೇದಿಕೆ ಸದಸ್ಯರು ಮತ್ತು ಅಭಿಮಾನಿಗಳು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಮಾಜ, ಸಂಘಟನೆ, ಸಹಬಾಳ್ವೆ ಹೆಸರಿನಲ್ಲಿ ತಾಲೂಕಿನಲ್ಲಿ ಕುರುಬ ಸಮುದಾಯ ಸಾಮಾಜಿಕ, ಶೈಕ್ಷಣಿಕ ಆರ್ಥಿಕವಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ ಇನ್ನಷ್ಟು ಬಲಗೊಳ್ಳುವ ಅನಿರ್ವಾಯತೆ ಇದೆ ಎಂದರು.
ವೇದಿಕೆಯ ಗೌರವಾಧ್ಯಕ್ಷ ರಾಘವೇಂದ್ರ ಪ್ರಸಾದ್ ಮಾತನಾಡಿ, ಈ ವೇದಿಕೆಯನ್ನು ಯಾವುದೇ ದುರುದ್ದೇಶದಿಂದ ರಚಿಸದೆ , ವೇದಿಕೆಯನ್ನು ಪ್ರತೀ ಗ್ರಾಮಕ್ಕೆ ಕೊಂಡೊಯ್ಯುವ ಮೂಲಕ ದೊಡ್ಡ ಸಂಘಟನೆ ಮಾಡಲಾಗುವುದು ಎಂದರು.
ಪದಾಧಿಕಾರಿಗಳಾದ ಯರದಕೆರೆ ಓಂಕಾರ್, ಎಚ್. ಜಗದೀಶ್, ಬಸಪ್ಪ, ಮಲ್ಲಿಕಾರ್ಜುನ್, ಸಿದ್ದಪ್ಪ, ಚಂದ್ರಪ್ಪ, ಕೆ.ಎಂ. ಹರೀಶ್, ಬಿ.ಆರ್. ಹರೀಶ್, ರಘು, ಲೋಕೇಶ್, ಗೋವಿಂದಪ್ಪ, ಎಂ.ಎನ್. ಚೇತನ್, ಲೋಕೇಶ್, ಗೋವಿಂದಪ್ಪ, ತ್ಯಾಗರಾಜ್, ಆಟೋ ಮಂಜು ಮೊದಲಾದವರು ಉಪಸ್ಥಿತರಿದ್ದರು.