ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆರೋಪಕ್ಕೆ ಜನತಾ ನ್ಯಾಯಲಯವೇ ತೀರ್ಮಾನ: ಜೀವರಾಜ್

Mainashree
Updated On : 20 Nov 2013, 11:21 am

ನರಸಿಂಹರಾಜಪುರ: ನನ್ನ ಮೇಲಿನ ಆರೋಪಕ್ಕೆ ಜನತಾ ನ್ಯಾಯಾಲಯವೇ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಶಾಸಕ ಡಿ.ಎನ್. ಜೀವರಾಜ್ ತಿಳಿಸಿದರು.
ಮಂಗಳವಾರ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋದ ಪಕ್ಷಗಳು ನಾನು ಶೃಂಗೇರಿ ಕ್ಷೇತ್ರದಿಂದ ಕಾಣೆಯಾಗಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ವಿರೋಧ ಪಕ್ಷಗಳು ಹಿಂಬಾಗಿಲಿನ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ನಾನು ಬಿಜೆಪಿ ಶಾಸಕನಾಗಿ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಬೆಂಗಳೂರಿನಲ್ಲಿ ನಡೆದ ಮೋದಿ ರ್ಯಾಲಿಯಲ್ಲಿ ಕಳೆದ ವಾರದಿಂದ ತೊಡಗಿಸಿಕೊಂಡಿದ್ದೆ. ಕ್ಷೇತ್ರದಲ್ಲಿ ಇರಲಿಲ್ಲ. ಇದನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ ಎಂದು ಟೀಕಿಸಿದರು.
ಸಮಸ್ಯೆ ಕಡೆ ಗಮನ ನೀಡಿ: ನನ್ನ ಮೇಲಿನ ಆರೋಪಗಳು ನ್ಯಾಯಾಲಯದ ಮುಂದೆ ಇರುವುದರಿಂದ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಆರೋಪ ಮಾಡುವುದನ್ನು ಬಿಟ್ಟು ಕ್ಷೇತ್ರದ ಒತ್ತುವರಿ ಸಮಸ್ಯೆ, ನಕ್ಸಲ್ ಸಮಸ್ಯೆ ಬಗೆಹರಿಸುವುದರ ಬಗ್ಗೆ ಗಮನ ನೀಡಲಿ ಎಂದು ಕಿವಿಮಾತು ಹೇಳಿದರು. ಈ ಹಿಂದಿನ ಸರ್ಕಾರದಿಂದ ಮಂಜೂರಾಗಿದ್ದ ಆಲ್ದೂರು- ಬಾಳೆಕೊಪ್ಪ ಬಿದರಗೋಡು ರಸ್ತೆಗೆ 23 ಕೋಟಿ, ಶೃಂಗೇರಿ ಕ್ಷೇತ್ರದ ರಸ್ತೆಗಳಿಗೆ 16 ಕೋಟಿ, ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ 20 ಕೋಟಿ ಹಣವನ್ನು ಬಿಡುಗಡೆ ಮಾಡಲು ಸರ್ಕಾರವು ಒಪ್ಪಿಗೆ ನೀಡಿದೆ ಎಂದರು.
ನೀಲೇಶ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಜಾತ,ಬಿಜೆಪಿ ಮುಖಂಡರಾದ ಎಸ್. ಗೋಪಾಲ್, ಕೆಸುವೆ ಮಂಜುನಾಥ್, ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement