ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾನೂನು ಅರಿವು ಕಾರ್ಯಕ್ರಮ

Mainashree
Updated On : 20 Nov 2013, 11:23 am

ಬೀರೂರು: ಪಟ್ಟಣದ ಕನ್ನಡ ಸಂಘದ ಕ್ರಮುಖ ಪ್ರೌಢಶಾಲೆ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀನಿವಾಸಗೌಡ ಮಾತನಾಡಿ, ಮಕ್ಕಳನ್ನು ಸರಿಯಾಗಿ ಬೆಳೆಸಿದರೆ ಉತ್ತಮ ದೇಶ ಕಟ್ಟಲು ಸಾಧ್ಯ. ನೆಹರೂ ಅವರು ಮಕ್ಕಳಲ್ಲಿ ವಿವೇಕಯತವಾಗಿರುವ ಗುಣ ತುಂಬಿ ಸದೃಢ ಪ್ರಜೆ ರೂಪಿಸುವುದಕ್ಕಾಗಿ ತಮ್ಮ ಜನ್ಮ ದಿನಾಚರಣೆಯನ್ನು ಮಕ್ಕಳಿಗೆ ಮೀಸಲಾಗಿಟ್ಟು ಮಕ್ಕಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ ಎಂದರು.
ವಕೀಲ ಕೆ.ಎನ್. ಬೊಮ್ಮಣ್ಣ ಮಾತನಾಡಿ, ಸಂವಿಧಾನದಡಿ ಒದಗಿಸಲಾಗಿರುವ ಅವಕಾಶಗಳು ಮಕ್ಕಳು ಹಾಗು ಬೇರೆ ಕಾನೂನುಗಳ ವಿಶೇಷತೆ, ಬಾಲ ನ್ಯಾಯ ಮಂಡಳಿಯ ಕಾರ್ಯಗಳು, ಮಕ್ಕಳು ಅನುಸರಿಸಬೇಕಾದ ನಿಯಮಗಳು ಹಾಗು ಪೋಷಕರ ಪಾತ್ರ ಕುರಿತು ವಿವರವಾಗಿ ಮಾಹಿತಿ ನೀಡಿದರು.
ವಕೀಲ ಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ 5 ಶಾಲೆಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಶಿಕ್ಷಣಾಧಿಕಾರಿ ಮೋಹನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಂಘದ ಅಧ್ಯಕ್ಷ ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಸಿ.ಎಲ್. ದೇವರಾಜ್, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅನುರೇವು, ಶಿಕ್ಷಣ ಇಲಾಖೆಯ ಮಹೇಂದ್ರ, ಕನ್ನಡ ಸಂಘದ ಕಾರ್ಯದರ್ಶಿ ಜಿ. ಎಚ್. ಭೂಷಣ್, ಉಪಾಧ್ಯಕ್ಷ ನಾರಾಯಣ್, ಖಜಾಂಚಿ ಕುಮಾರಸ್ವಾಮಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement