ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕನಕರ ಗ್ರಂಥದಿಂದ ಕನ್ನಡ ಶ್ರೀಮಂತ: ಶಾಸಕ

Lingaraj Badiger
Updated On : 21 Nov 2013, 10:37 am

ಕ.ಪ್ರ.ವಾರ್ತೆ ತರೀಕೆರೆ ನ. 20
ಭಕ್ತ ಕನಕದಾಸರು ಮೌಲಿಕ ಗ್ರಂಥಗಳನ್ನು ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಅವರು, ತಾಲೂಕು ಅಡಳಿತ, ತಾಪಂ, ಪುರಸಭೆ ವತಿಯಿಂದ ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಭಕ್ತ ಕನಕದಾಸರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನಕದಾಸರು ಸಂತ ಶ್ರೇಷ್ಠರಾಗಿದ್ದರು. ಅವರು ರಚಿಸಿದ ಗೀತೆಗಳು ವಿಶ್ವಶ್ರೇಷ್ಠವಾಗಿದ್ದು, ಇಂದಿಗೂ ಜನರ ಮನಸ್ಸಿನಲ್ಲಿದೆ. ಎಂದು ಅವರು ಪಟ್ಟಣದಲ್ಲಿ ಪುರಸಭೆ ಸದಸ್ಯರ ಸಹಕಾರದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪಿಸಿ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣನವರ ಹೆಸರಿಡಲಾಗುವುದು ಎಂದು ಅವರು ತಿಳಿಸಿದರು.
ದಾಸ ಶ್ರೇಷ್ಠ: ಉಪವಿಭಾಗಾಧಿಕಾರಿ ಜಿ. ಅನುರಾಧಾ ಕಾರ್ಯಕ್ರಮ ಉದ್ಘಾಟಿಸಿ, ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ. ವಿಶ್ವದಲ್ಲೇ ದಾರ್ಶನಿಕ ಮತ್ತು ಸಂಗೀತ, ಭಕ್ತಿ ಪಂಥದಲ್ಲಿ ಮುಖ್ಯರಾಗಿದ್ದಾರೆ ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಟಿ.ಎನ್. ಗೋಪಿನಾಥ್ ಮಾತನಾಡಿದರು. ಸಪ್ರದ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಎ. ನಾಗರಾಜಪ್ಪ ವಿಶೇಷ ಉಪನ್ಯಾಸ ನೀಡಿದರು.
ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ದರ್ಶನ್, ಗುರು ಕಾಗಿನೆಲೆ ಆದಿಕೇಶವ ಭಕ್ತ ಕನಕದಾಸರ ಸಮಿತಿ ಗೌರವ ಅಧ್ಯಕ್ಷ ಟಿ.ಎಂ. ಭೋಜರಾಜ್, ಕುರುಬ ಸಂಘದ ಸದಸ್ಯರು, ಪುರಸಭಾ ಸದಸ್ಯರು, ಡಿವೈಎಸ್‌ಪಿ ಚಿದಾನಂದಸ್ವಾಮಿ, ತಹಸೀಲ್ದಾರ್ ಶಿವಕುಮಾರ್, ಮುಖ್ಯಾಧಿಕಾರಿ ಪಲ್ಲವಿ, ಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಕಲಾ ತಂಡಗಳು ಹಾಗೂ ಸ್ಥಬ್ದ ಚಿತ್ರದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement