ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೈಗಾರಿಕೆ ಹೆಚ್ಚಳದಿಂದ ಪರಿಸರ ನಾಶ

Lingaraj Badiger
Updated On : 21 Nov 2013, 10:37 am

ಕ.ಪ್ರ.ವಾರ್ತೆ  ಶೃಂಗೇರಿ  ನ. 20
ಗಣಿಗಾರಿಕೆ, ಸತತ ಅರಣ್ಯನಾಶ, ಹೆಚ್ಚುತ್ತಿರುವ ಕೈಗಾರಿಗಳಿಂದ ಹೊರಹೊಮ್ಮುವ ವಿಷಯುಕ್ತ ರಾಸಾಯನಿಕ ಪದಾರ್ಥಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಸಿಹಿನೀರಿನ ಜೀವ ವೈವಿಧ್ಯ  ಪರಿಸರ ವ್ಯವಸ್ಥೆ ಕ್ಷೀಣಿಸುತ್ತಿದೆ ಎಂದು ಕೊಯಮುತ್ತೂರಿನ ಝೂ ಔಟ್‌ರಿಚ್ ಸಂಸ್ಥೆಯ ಡಾ. ಡೇನಿಯಲ್ ವಿಷಾದ ವ್ಯಕ್ತಪಡಿಸಿದರು.
 ಪಟ್ಟಣದ ಜೆಸಿಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ  ವಿಜ್ಞಾನ  ಶಿಕ್ಷಕರಿಗಾಗಿ ಸಹ್ಯಾದ್ರಿ ಸಿಹಿ ನೀರಿನ ಜೀವ ವೈವಿಧ್ಯತೆ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತಾನಾಡಿದರು.
ಅಲ್ಪ ಪ್ರಮಾಣದ ನೀರು: ಭೂಮಿಯ ಮೇಲಿರುವ ಒಟ್ಟು ನೀರಿನಲ್ಲಿ ಶೇ. 97 ಉಪ್ಪು ನೀರಾಗಿದ್ದರೆ, ಉಳಿದ ಕೇವಲ ಶೇ. 3 ಮಾತ್ರ ಸಿಹಿ ನೀರಾಗಿದೆ. ಇದರಲ್ಲಿಯೂ ಮೂರನೇ ಎರಡು ಭಾಗ ಧ್ರುವ ಪ್ರದೇಶಗಳಲ್ಲಿ ಹೆಪ್ಪುಗಟ್ಟಿರುವ ನೀರ್ಗಲ್ಲಾಗಿದ್ದರೆ ಉಳಿದಿದ್ದು, ದ್ರವರೂಪದಲ್ಲಿ ಅಂತರ್ಜಲವಾಗಿದೆ. ಇದರಲ್ಲಿ ಅಲ್ಪ ಪ್ರಮಾಣದ ನೀರು ಭೂಮಿಯ ಮೇಲೆ, ವಾತಾವರಣದಲ್ಲಿ ಕಂಡುಬರುತ್ತದೆ.
ಅಂತರ್ಜಲ ಕುಸಿಯುತ್ತಿರುವುದರಿಂದ ಜಲಚರಗಳ ಸಂಖ್ಯೆಯೂ ವಿನಾಶದಂಚಿಗೆ ಸಾಗುತ್ತಿದೆ. ಜಗತ್ತಿಗೆ ಪೊರೈಕೆಯಾಗುವಷ್ಟು ಸಿಹಿನೀರಿನ ಪ್ರಮಾಣ ಹಂತಹಂತವಾಗಿ ಕುಸಿಯುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ ನೀರಿನ ಬೇಡಿಕೆಯೂ ಹೆಚ್ಚುತ್ತಿದ್ದು, ಜಲಮೂಲವನ್ನು ಸಂರಕ್ಷಿಸಬೇಕಿದೆ ಎಂದರು.
ಎಚ್.ಸಿ. ರಾಮಚಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಮೊದಲಾದವರು ಉಪಸ್ಥಿರಿದ್ದರು.
ತಾಲೂಕಿನ ವಿವಿಧ ಶಾಲೆಯ ವಿಜ್ಞಾನ ಶಿಕ್ಷಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪಶ್ಚಿಮಘಟ್ಟದ ಸಿಹಿ ನೀರಿನ ಜೀವವೈವಿಧ್ಯತೆ  ಬಗ್ಗೆ ಮಾಹಿತಿ ಸಂವಾದ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement